ಹಾಯ್ ಬೆಂಗಳೂರ್

  ದುರ್ಮರಣಗಳ ಕತ್ತಲೆಯಲ್ಲಿ

ದುರ್ಮರಣಗಳ ಕತ್ತಲೆಯಲ್ಲಿ
ಸಾಗುತ್ತಿರುವ ಮನುಜನ ನೆತ್ತಿಯ ಮೇಲೆ
ಬರೀ ಮೂಳೆ ರಕ್ತ ಮಾಂಸದ ಮಹಾಭಿಷೇಕ
ಬೆಳಕನ್ನೆಲ್ಲಿ ಹುಡುಕುವುದೋ
ಮುರಿದು ಬಿದ್ದ  ಸಮಾಧಿಯೊಳಗೆ ?
ಸಾವಿನಿಂದುದಿಸಿದ ತಾಪದ ಮೇಲೆ
ಬೇಯಿಸಿಕೊಳ್ಳುತ್ತಿದೆ ವಿಧಿ
ಎಂದೂ ಕುದಿಯಲಾರದ ಬೇಳೆಗಳ
ಬೆಂದುಹೋಗುವವೆಂದು ಕಾದಿದೆ
ಜಗ ನಡುಗಿ ಬಿಡುಗಣ್ಣ ಬಿಟ್ಟುಕೊಂಡು ಭರವಸೆಯ ಕೆದಕಿ
ಜವರಾಯನ ಭೋಜನವಿಂದು
ಪುಷ್ಕಳಮಾಯ್ತು ಜೀವಗಳನುಂಡು ತೇಗಿ
ಅತಿರೇಕಗಳನೆಲ್ಲ ಇನ್ನಿಲ್ಲದಂತೆ ಬಳಿದು ಸಾಂಬಾರಿನಂತೆ ಹೀರಿ
ಬಗೆ ಬಗೆಯ ಒಡಲ ಭಕ್ಷ್ಯಗಳ
ಸವಿರುಚಿಯ ಚಪ್ಪರಿಸಿದೆ ತೂಗಿ
ಕಳೆಗಟ್ಟಿದೆ ಹಬ್ಬವಿಂದು ಸಲ್ಲುವವರಿಂದಲೇ ತುಂಬಿಕೊಂಡು ಆ ಯಮಲೋಕ
ಕರ್ತಾರನ ಕಮ್ಮಟದ ಖಾಲಿತನದಿ
ನಿರ್ಭಾವದಿಂದೆದ್ದ ಒಳಸುಳಿಗಳನೇಕ
ಭುವನದೆಣಿಕೆಗೆ ದಕ್ಕೀತೇ ಲಯಕಾರನ ಮಾಯೆಯೊಳಗಿನ ರಾಮನ ಲೆಕ್ಕ
ಹೆಣಗಳ ಸೇತುವೆಯ ಕೊನೆಗೆ
ನಂಬಿಕೊಂಡ ಅಮರ ದೇವಲೋಕ
ಸಕ್ಕರೆಯಿರುವಲ್ಲಿ ಹೊರಟಿದೆ
ಹುಡುಕಾಟದ ಇರುವೆಗಳ ಮೆರವಣಿಗೆ
ಮುಕ್ತಿಯೆಂದವರಲ್ಲೀಗ ಹೇಳತೀರದ ಹಿಂಜರಿಕೆ
ತುಂಬಿದೆ ಜಗವೆಲ್ಲಾ ಕಮಟು ಜೀವದ ವಾಕರಿಕೆ
ಪ್ರೊ.ಚಂದ್ರಶೇಖರ ಹೆಗಡೆ 

One thought on “  ದುರ್ಮರಣಗಳ ಕತ್ತಲೆಯಲ್ಲಿ

 1. ಕೋಟೆಕಲ್ ಅಂದರೆ ನೆನಪಿಗೆ ಬರುವುದು

  ಕೋಟೆಕಲ್ ಗ್ರಾಮದಲ್ಲಿ ಆಗ್ರಾದ ಇತಿಹಾಸ ಹೊಂದಿದ ಗ್ರಾಮ ಎಂದು ಕರೆಯಲ್ಪಟ್ಟಿರುವುದು ಅದಕ್ಕೆ ಗುಡ್ಡದ ಮೇಲೆ ಇರುವ ಈಗಲೂ ಗುಡಿಗುಂಡಾರ ಮನೆ ಮಸೀದಿ, ಬಸವೇಶ್ವರ ಗುಡಿ ದೇವಸ್ಥಾನಗಳು ಹೊಂದಿರುವುದು. ಇತ್ತೀಚಿನ ವರ್ಷಗಳಲ್ಲೇ ಊರಿಗೆ ತಳಗೆ ಬಂದಿರುವುದು ಅದೇ ರೀತಿ 12ನೇ ಶತಮಾನದಲ್ಲಿ ಹೊಂದಿರುವ ಮಠವೊಂದು ಹೊಂದಿರುತ್ತದೆ ಮರಳು ಶಂಕರ ದೇವರು ಮಠ ಇದ್ದಿರುವುದು ಶ್ರೀ ಹೊಳೆ ಹುಚ್ಚೇಶ್ವರ ಮಠ ಸ್ಥಾಪನೆಗೆ ಮೂಲತಃ ದೇಸಾಯಿ ಮನೆತನದವರು ಕಾರಣ. ಈಗಲೂ ದೇಸಗತಿ ಪರಿವಾರದ ನಿಯಮಾನುಸಾರ ಇರುವುದು ಇತ್ತೀಚಿನ ದಿನಮಾನದಲ್ಲಿ ಕೋಟೆ ಕಲಾಗ್ರಾಮ ಕರ್ನಾಟಕ ರಾಜ್ಯ ತುಂಬಾ ಪ್ರಸಿದ್ಧವಾಗಿರುವುದು ಏಕೆಂದರೆ 2011ರಲ್ಲಿ ಹುಚ್ಚೇಶ್ವರ ಮಠದಲ್ಲಿ ಪುರಾಣ ಶತಮಾನೋತ್ಸವದ ಕರ್ನಾಟಕದಲ್ಲಿ ಪ್ರಥಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿದ ಕಾರ್ಯಕ್ರಮದಲ್ಲಿ ಬಸವ ಪುರಾಣ ಪ್ರವಚನ ನೂರಾರು ನಡೆದಾಡುವ ದೇವರ ಸಮ್ಮುಖದಲ್ಲಿ ಕಾರ್ಯಕ್ರಮ ಇತಿಹಾಸ ನಿರ್ಮಿಸಿದ್ದು ಅದೇ ರೀತಿ 5 ಪಂಚ ಪೀಠಾಧೀಶರು ಸಮ್ಮುಖದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಮಹಾದಾಸೋಹ ಕಾರ್ಯಕ್ರಮವನ್ನು ಪ್ರಸಿದ್ಧವಾಗಿರುವುದು ರಾಜ್ಯದ ಜನರು ಮನಸ್ಸಿನಲ್ಲಿ 4 ಸ್ಥಳಗಳ ಮರುಳಶಂಕರ ದೇವರ ಅದು ಹೀಗೆ ಹೊಳೆ ಹುಚ್ಚೇಶ್ವರ ಸಂಸ್ಥಾನಮಠ ಉದ್ಭವಮೂರ್ತಿ ವಾದ ಮಾರುತಿ ದೇವಸ್ಥಾನ, ಕಾಶಿ ಜಗದ್ಗುರುಗಳ ನೆನಪಿಗೆ ಎಲ್ಲಿ ಊರೆಂದರೆ ಕೋಟೆಕಲ್ ಅಮರೇಶ್ವರ ಮಠದವರು ಎಂಬ ಇದೀಗ ದಿಡುಗು ಹಳ್ಳ ನೆನಪಿಗೆ ಉಳಿದಿರುವುದು ಅದು ಕೋಟೆಕಲ್ ಗ್ರಾಮ ಕಳೆದ ಎಪ್ಪತ್ತು ವರ್ಷಗಳ ಹಿಂದೆ ಯಾರು ದಿಡ್ಡಿಗಿ ಹಳ್ಳ ದಿಡಗ ನೋಡಲು ಯಾರೂ ಬರುತ್ತಿದ್ದಿಲ್ಲ ಕಳೆದ ಮೂರ್ನಾಲ್ಕು ವರ್ಷದ ದಿಂದಲೇ ಮಳೆಗಾಲ ಬಂದರೆ ಸಾಕು ಕೋಟೆಕಲ್ ಗ್ರಾಮ ನೆನಪಿಗೆ ಬರುತ್ತಿರುವುದು ಜನರಲ್ಲಿ ಮನೆಮಾಡಿರುತ್ತದೆ ಏಕೆಂದರೆ ದಿಡುಗಿನ ಹಳ್ಳ ಜನರನ್ನು ಆಕರ್ಷಿತ ಸ್ಥಳ ವಾಗಿರುವುದು ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವುದು.

  ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆ ಆಗುತ್ತಿದ್ದು, ಗುಳೇದಗುಡ್ಡ ಪಟ್ಟಣದ ಬಳಿಯಿರುವ ದಿಡಗಿನ ಫಾಲ್ಸ್ ಇದೀಗ ಜನತೆಗೆ ಆಕರ್ಷಿತ ಕೇಂದ್ರವಾಗಿದೆ. ಪ್ರಕೃತೀಯ ರಮಣೀಯ ಸ್ಥಳದಲ್ಲಿ ಬೀಳುತ್ತಿರುವ ಇಂತಹ ಫಾಲ್ಸ್​ನನ್ನು ನೋಡಲು ಸುತ್ತಮುತ್ತಲಿನ ಜನ ಆಗಮಿಸಿ, ನೀರಿನಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

  ಬೆಟ್ಟದ ಮೇಲಿಂದ ಬೀಳುತ್ತಿರುವ ಈ ಫಾಲ್ಸ್ ನೋಡಿದರೆ ಕರಾವಳಿ ಪ್ರದೇಶ ಎಂದು ಊಹಿಸಬಹದು. ಆದರೆ ಇದು ಬರದ ನಾಡು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣ ಬಳಿಯ ಸಮೀಪದ ಕೋಟೆಕಲ್ ಗ್ರಾಮದಲ್ಲಿ ದಿಡಗಿನ ಫಾಲ್ಸ್. ನೇಕಾರರ ನಗರ ಎಂದು ಖ್ಯಾತಿ ಪಡೆದಿರುವ ಗುಳೇದಗುಡ್ಡ ಪಟ್ಟಣದ ಬೆಟ್ಟದ ಮೇಲೆ ಇರುವ ಈ ಫಾಲ್ಸ್ ಅತಿ ಹೆಚ್ಚು ಮಳೆ ಆದಾಗ ಹರಿಯುತ್ತದೆ. ಇದನ್ನು ವೀಕ್ಷಣೆ ಮಾಡಲು ಸುತ್ತಮುತ್ತಲಿನ ಜನತೆ ಆಗಮಿಸಿ, ನೀರಿನಲ್ಲಿ ಕುಣಿದು ಕುಪ್ಪಳಸಿ ಸಂತಷ ಪಡುತ್ತಿದ್ದಾರೆ. ಬೆಟ್ಟದ ಮೇಲೆ ಸುಮಾರು ಐದು ಕಿಲೋ ಮೀಟರ್​​ನಷ್ಟು ದೂರು ನಡೆದುಕೊಂಡು ಹೋದ ಬಳಿಕ ಈ ಫಾಲ್ಸ್ ಕಾಣುತ್ತದೆ. ಪ್ರವಾಸಿ ಕೇಂದ್ರವಾಗಿರುವ ಇಲ್ಲಿಗೆ ಸ್ಥಳೀಯರು ಕುಟುಂಬ ಸಮೇತ ಆಹಾರವನ್ನು ತೆಗೆದುಕೊಂಡು ಹೋಗಿ, ನೀರಿನಲ್ಲಿ ಕುಣಿದು ಕುಪ್ಪಳಿಸಿದ ನಂತರ ಎಲ್ಲರೂ ಸೇರಿಕೊಂಡು ಊಟವನ್ನು ಮಾಡಿಕೊಂಡು ಬರುತ್ತಾರೆ
  ಮೊಬೈಲ್ ಸಹಾಯದಿಂದಲೇ ಬರೆದಿದ್ದು
  ಶ್ರೀ ಗುಂಡಪ್ಪ ಶಂಕ್ರಪ್ಪ ಕೋಟಿ ಸಮಾಜ ಸೇವಕ ಕೋಟಕಲ್ 9900752344=9972130452

Leave a Reply

Your email address will not be published. Required fields are marked *