ದಿಗಂತ್ ಮತ್ತು ಐಂದ್ರಿತಾ ಬಗ್ಗೆ ಚಿತ್ರರಂಗದಲ್ಲಿ ಒಳ್ಳೆ ಅಭಿಪ್ರಾಯ ಯಾಕಿಲ್ಲ ಗೊತ್ತಾ?

in ಜಿಲ್ಲಾ ಸುದ್ದಿಗಳು/ಸಿನೆಮಾ ಪುಟ
  • ದಿಗಂತ್ ಮತ್ತು ಐಂದ್ರಿತಾ ರೇ ಬಗ್ಗೆ ಗಾಂಧಿನಗರದಲ್ಲಿ ಒಳ್ಳೆ ಅಭಿಪ್ರಾಯವಿಲ್ಲ. ಶೂಟಿಂಗ್ ವೇಳೆ ಶಿಸ್ತು ಕಾಪಾಡಿಕೊಳ್ಳುತ್ತಿರಲಿಲ್ಲ. ಪ್ರಾಜೆಕ್ಟ್ ಒಪ್ಪಿಕೊಂಡು ಇದ್ದಕ್ಕಿದ್ದಂತೆ ಕೈ ಕೊಟ್ಟುಬಿಡೋದು, ಹೇಳಿದ ಸಮಯಕ್ಕೆ ಬರದೇ ಇರೋದು, ಫೋನ್ ತೆಗೆಯದೇ ಇರೋದು-ಹೀಗೆ ಅನೇಕ ನಿರ್ದೇಶಕರಿಗೆ, ನಿರ್ಮಾಪಕರಿಗೆ ಇವರು ಕಾಟ ಕೊಟ್ಟಿದ್ದಾರೆ ಎನ್ನಲಾಗಿದೆ.
  • ನಾಗತಿಹಳ್ಳಿ ಚಂದ್ರಶೇಖರ್ ಅವರಂತಹ ನಿರ್ದೇಶಕರಿಗೇನೆ ಐಂದ್ರಿತಾ ರೇ ಆಟ ಆಡಿಸಲು ಹೋಗಿ ಯಗ್ಗಾಮಗ್ಗಾ ಉಗಿಸಿಕೊಂಡಿದ್ದಳು. ಜಂಗ್ಲಿ ಸಿನೆಮಾದಲ್ಲೂ ಈಕೆ ಕ್ಯಾತೆ ತೆಗೆದಿದ್ದಳು.
  • ಕತೆ ಕೇಳುವಾಗ ಒಪ್ಪಿಕೊಳ್ಳುತ್ತಾಳೆ, ನಂತರ ಸೆಟ್ ಗೆ ಬಂದು ನಾ ಸೀನ್ ಮಾಡಲ್ಲ, ಈ ಸೀನ್ ಮಾಡಲ್ಲ ಅಂತ ಕಿರಿಕ್ ಮಾಡ್ತಾಳೆ-ಹೀಗೆ ಈಕೆಯ ಮೇಲೆ ಅನೇಕ ನಿರ್ದೇಶಕರು, ನಿರ್ಮಾಪಕರು ದೂರುತ್ತಾರೆ. ಇದರಿಂದಲೇ ಈಕೆಗೆ ಬರ್ತಾ ಬರ್ತಾ ಅವಕಾಶಗಳು ಕಡಿಮೆಯಾದವು.
  • ಇನ್ನು ಆ ದೂದ್ ಪೇಡಾ ದಿಗಂತ್ ಬಗ್ಗೆ ಹೇಳೋದೇ ಬೇಡ. ಆಸಾಮಿ ಫೋನೇ ಎತ್ತಲ್ಲ. ಏನಾದರೂ ಕಮ್ಯುನಿಕೇಟ್ ಮಾಡೋಣ ಅಂದ್ರೂನು ಅದು ಸಾಧ್ಯವಾಗೋದಿಲ್ಲ. ಮೆಸೇಜ್ ಮಾಡಿದ್ರೂ ಕೂಡ ರಿಪ್ಲೈ ಮಾಡೋಲ್ಲ ಎಂಬ ಕಂಪ್ಲೇಂಟ್ ಗಳಿವೆ. ಇದೇ ಕಾರಣಕ್ಕೆ ಇವರಿಬ್ಬರಿಗೂ ಚಿತ್ರಗಳು ಕಡಿಮೆಯಾಗುತ್ತಾ ಹೋದವು ಎಂಬ ಮಾತುಗಳು ಕೇಳಿಬರುತ್ತಿವೆ.
  • ಇದೀಗ ಸಿಸಿಬಿ ಪೊಲೀಸರು ನೋಟಿಸ್ ಬೇರೆ ನೀಡಿದ್ದಾರೆ. ಇನ್ನೇನು ಅಪರಾತಪರಾಗಳು ಮಾಡಿದ್ದಾರೋ ಗೊತ್ತಿಲ್ಲ. ವಿಚಾರಣೆ ನಡೆದ ಮೇಲೆ ಇವರಿಗೂ ಜೈಲೇ ಗತಿ ಎಂಬ ಮಾತುಗಳು ಕೇಳಿಬರುತ್ತಿವೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

Go to Top