ಜೂನ್ 8 2019 ರಂದು ಶ್ರೀಲಂಕಾದ ಕೊಲಂಬೋದ ಕ್ಯಾಸಿನೋವೊಂದರಲ್ಲಿ ಜಮೀರ್ ಅಹಮದ್ ಖಾನ್ ಮತ್ತು ನಟಿ ಸಂಜನಾ ಒಟ್ಟಿಗೆ ಕಾಣಿಸಿಕೊಂಡಿದ್ದರು ಅಂತ ಪ್ರಶಾಂತ್ ಸಂಬರಗಿ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ.
ನಮ್ಮ ಜೀವನದಲ್ಲೇ ನೋಡಲು ಸಾಧ್ಯವಾಗದಷ್ಟು ದೊಡ್ಡ ಮೊತ್ತವನ್ನು ಜಮೀರ್ ಅಹಮದ್ ಅವರು ಶ್ರೀಲಂಕಾಗೆ ತೆಗೆದುಕೊಂಡು ಹೋಗಿ ಕಳೆದುಕೊಂಡಿದ್ದಾರೆ. ಇವರನ್ನು ಪೊಲೀಸ್ ತನಿಖೆಗೆ ಒಳಪಡಿಸಿದರೆ ಸಾಲದು. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ತನಿಖೆ ಮಾಡಬೇಕು ಎಂದಿದ್ದಾರೆ.
ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ, ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಬೇಕಾದರೂ ಹೂಡಲಿ ಅಂತ ಪ್ರಶಾಂತ್ ಸಂಬರಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.