ಹಾಯ್ ಬೆಂಗಳೂರ್

ಸೋಷಿಯಲ್ ಮೀಡಿಯಾದಲ್ಲೇ ಡಿ ಬಾಸ್ ಹುಟ್ಟುಹಬ್ಬದ ಆಚರಣೆ

ಇಂದು ದರ್ಶನ್ ಅಭಿಮಾನಿಗಳಿಗಂತೂ ಹಬ್ಬವೋ ಹಬ್ಬ. ಕಾರಣ ಛಾಲೆಂಜಿಂಗ್ ಸ್ಟಾರ್, ಡಿ ಬಾಸ್ ಇಂದು ನಲವತ್ತನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಇರೋದ್ರಿಂದ ಅಭಿಮಾನಿಗಳು ಬರೋದು ಬೇಡ ಅಂತ ಮೊದಲೇ ಹೇಳಿದ್ದರಿಂದ ಯಾರೊಬ್ಬರೂ ಮನೆಗೆ ಬಂದಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಶುಭಾಶಯಗಳ ಸುರಿಮಳೆ ಸುರಿಯುತ್ತಲೇ ಇದೆ.

“ನಿನ್ನ ಜೀವನಕ್ಕೆ ಒಂದಷ್ಟು ಅರ್ಥ ಬರುವಂತಹ ವರ್ಷಗಳನ್ನು ನೀನು ಕಳೆಯುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ. ನಿನ್ನ ಯಶಸ್ಸಿನ ನಾಗಾಲೋಟ ಹೀಗೇ ಮುಂದುವರೆಯಲಿ” ಅಂತ ಸಂಸದೆ, ನಟಿ ಸುಮಲತಾ ಅಂಬರೀಷ್ ದರ್ಶನ್ ಗೆ ಶುಭ ಕೋರಿದ್ದಾರೆ.

ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ, ಅಭಿಷೇಕ್ ಅಂಬರೀಷ್ ಸೇರಿದಂತೆ ಇನ್ನೂ ಅನೇಕರು ತಮ್ಮ ಪ್ರೀತಿಯ ಹಾರೈಕೆಗಳನ್ನು, ಶುಭಾಶಯಗಳನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *