ಕಲಾಲೋಕದ ಕೊಡುಗೆ

in ಸಿನೆಮಾ ಪುಟ

ಕರ್ನಾಟಕ ಲಾಕ್ ಡೌನ್ ವಿಷಯದಲ್ಲಿ ಇಡೀ ಸ್ಯಾಂಡಲ್‌ವುಡ್ ಅಭೂತಪೂರ್ವ ಸಾಥ್ ನೀಡಿದ್ದು ಶಿವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್,  ಸುದೀಪ್, ದರ್ಶನ್, ನೆನಪಿರಲಿ ಪ್ರೇಮ್, ಸೃಜನ್ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಜನರಿಗೆ ಮತ್ತು ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಕಿರುತೆರೆ ನಟಿ ದೀಪಿಕಾ ದಾಸ್

ಪುನೀತ್ ಐವತ್ತು ಲಕ್ಷ ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಗೆ ಕೊಡುವ ಮೂಲಕ ದೊಡ್ಮನೆಯ ದೊಡ್ಡತನಕ್ಕೆ ಕನ್ನಡಿ ಹಿಡಿದಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ತಾವು ಕಂಠದಾನ ಮಾಡಿ ದುಡಿದ ದುಡ್ಡಲ್ಲಿ ಒಂದಷ್ಟನ್ನು ಕೊರೋನಾ ಕಷ್ಟದಲ್ಲಿರುವ ಸಂತ್ರಸ್ತರಿಗೆ ದಾನ ಮಾಡಿದ್ದಾರೆ. ಇನ್ನುಳಿದಂತೆ ‘ನಾಗಿಣಿ’ ಖ್ಯಾತಿಯ ಕಿರುತೆರೆ ನಟಿ ದೀಪಿಕಾ ದಾಸ್ ಐದು ಲಕ್ಷ ಹಣ ನೀಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿದೆ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ತನ್ನ ದುಡಿಮೆಯ ಹೆಚ್ಚಿನ ಭಾಗವನ್ನು ಬಡ ಬಗ್ಗರಿಗೆ ದಾನ ಮಾಡಿದ್ದಾರೆ. ಮಾತಿನ ಮಲ್ಲ ಕಿರಿಕ್ ಕೀರ್ತಿ ದುಡ್ಡು ಕೊಡುವುದರ ಜೊತೆಗೆ ಫಂಡ್ ಕೂಡ ಕಲೆಕ್ಟ್ ಮಾಡಿದ್ದಾರೆ. ಆ ಎಲ್ಲಾ ದುಡ್ಡನ್ನು ಜನರಿಗೇ ಹಂಚಿಕೆ ಮಾಡಿದ್ದಾರೆ. ಇನ್ನುಳಿದಂತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಬರೀ ಹಾಡನ್ನಷ್ಟೇ ರೆಕಾರ್ಡ್ ಮಾಡಿ ಜನಕ್ಕೆ ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಕೊರೋನಾ ಕಷ್ಟಕ್ಕೆ ಮಿಡಿದಿದ್ದಾರೆ. ಫಿಲಂ ಛೇಂಬರ್, ನಿರ್ಮಾಪಕ ಸಂಘ, ನಿರ್ದೇಶಕರ ಸಂಘ, ಒಂದಷ್ಟು ಕಲಾವಿದರು ತಂತ್ರಜ್ಞರ ಕಲ್ಯಾಣ ನಿಧಿ ಸಂಗ್ರಹಿಸಲು, ಸಂಬಂಧಪಟ್ಟ ಪರಿಹಾರ ನಿಧಿ ಕೊಡಿಸಲು ಇನ್ನೂ ಒದ್ದಾಡುತ್ತಲೇ ಇದ್ದಾರೆ. ಈ ಓಡಾಟದಲ್ಲಿ ಛೇಂಬರ್ ಅಧ್ಯಕ್ಷ ಜೈರಾಜ್ ಒಂದೂಕಾಲು ಕೆಜಿ ಕಮ್ಮಿ ಆದ ಅನುಮಾನವಿದೆ!

Leave a Reply

Your email address will not be published.

*

Latest from ಸಿನೆಮಾ ಪುಟ

ಜಯಂತಿಗೆ ಕೊರೋನಾ ನೆಗೆಟಿವ್!

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿಯವರುಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಅಡ್ಮಿಟ್

‘ಕೊರೋನಾ’ಜನಕ ಕಥೆಗಳು!

ಕೊರೋನಾ ಕಾಟಕ್ಕೆ ಇಡೀ ಚಿತ್ರೋದ್ಯಮ ತತ್ತರಿಸಿ ಹೋಗಿದೆ. ಕೊರೋ‌ನಾಗೆ ಸಂಬಂಧಿಸಿದಂತೆ ಸಿನೆಮಾ ನಟರೆಲ್ಲಾ ಸೇರಿ ಒಂದಷ್ಟು

ಅಪ್ಪು ಫ್ಯಾಮಿಲಿ ಪ್ಯಾಕ್!

ಕೌಟುಂಬಿಕ ಸಿನೆಮಾಗಳನ್ನು ಮಾಡುವಲ್ಲಿ ರಾಜ್ ಕುಟುಂಬ ಎತ್ತಿದ ಕೈ ಎನ್ನುವುದನ್ನು ವಜ್ರೇಶ್ವರಿ ಕಂಬೈನ್ಸ್ ಈಗಾಗಲೇ ಸಾಬೀತು
Go to Top