ಕೊರೋನಾ: ಟೆಸ್ಟ್ ಬೇಕೋ ಬೇಡವೋ ಎಂದು ವೈದ್ಯರೇ ತೀರ್ಮಾನಿಸುತ್ತಾರೆ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಟೆಸ್ಟ್ ಬೇಕೋ ಬೇಡವೋ ಎಂದು ವೈದ್ಯರೇ ತೀರ್ಮಾನಿಸುತ್ತಾರೆ

ಕೊರೋನಾ ವೈರಸ್ ಟೆಸ್ಟ್ ಬಗ್ಗೆ ಹಲವರು‌ ಕೇಳುತ್ತಿದ್ದಾರೆ. ಎಲ್ಲರೂ ಈ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಯಾರಿಗೆ ಕೆಮ್ಮು, ನೆಗಡಿ , ಜ್ವರಗಳಂತಹಾ ಲಕ್ಷಣಗಳಿದ್ದು, ಅವರು ಕೋವಿಡ್ 19 ಹರಡಿರುವ ದೇಶಗಳಿಗೆ ಹದಿನಾಲ್ಕು ದಿನಗಳೊಳಗೆ ಹೋಗಿ ಬಂದಿದ್ದರೆ ಅಂಥವರು ಟೆಸ್ಟ್ ಮಾಡಿಸಿಕೊಳ್ಳಬೇಕಾಗುತ್ತದೆ. ಎಲ್ಲ ಕಡೆಯೂ ಈ ಟೆಸ್ಟ್ ಮಾಡುವುದಿಲ್ಲ. ಇದನ್ನು ಕೆಲವು ಕಡೆ ಮಾತ್ರ ಮಾಡಲಾಗುತ್ತದೆ‌. ಉದಾಹರಣೆಗೆ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ನಲ್ಲಿ ಖಂಡಿತ ಮಾಡುತ್ತಾರೆ. ಅಲ್ಲಿಗೆ ಹೋಗಿ ನೀವು ಟೆಸ್ಟ್ ಮಾಡಿ ಎಂದು ಡಿಮ್ಯಾಂಡ್ ಮಾಡುವುದು ಬೇಡ. ಬದಲಾಗಿ ವೈದ್ಯಕೀಯ ಸಲಹೆ ಪಡೆಯಿರಿ. ನಿಮಗೆ ಈ ಟೆಸ್ಟ್ ನ ಅವಶ್ಯಕತೆಯಿದೆ ಎಂದರೆ ಅವರೇ ಪರೀಕ್ಷೆ ಮಾಡುತ್ತಾರೆ. ಅದಕ್ಕೆ ಅದರದ್ದೇ ಆದ ಕ್ರೈಟೀರಿಯಾಗಳಿವೆ. ಅವರೇನಾದರೂ ನಿಮಗೆ ಈ ಟೆಸ್ಟ್ ಬೇಡ ಎಂದರೆ ನೀವು ವಾಪಾಸ್ ಬರುವುದು ಒಳ್ಳೆಯದು. ಎಲ್ಲರಿಗೂ ಆ ಟೆಸ್ಟ್ ಮಾಡಬೇಕಿಲ್ಲ. ಎಲ್ಲಾ ಲ್ಯಾಬೊರೇಟರಿಗಳಲ್ಲೂ ಈ ಟೆಸ್ಟ್ ಮಾಡುತ್ತಿಲ್ಲ. ನೀವು ಯಾವುದೋ ಲ್ಯಾಬೊರೇಟರಿಯಲ್ಲಿ ಹೋಗಿ ಕೋವಿಡ್ 19 ಟೆಸ್ಟ್ ಮಾಡಿ ಎಂದರೆ ಮಾಡುವುದಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಸ್ಯಾಂಪಲ್‌ ಕಲೆಕ್ಷನ್ ಅಂತ ಮಾಡುತ್ತಾರೆ. ಹೀಗಾಗಿ ನೀವು ಎಲ್ಲಾ ಕಡೆ ಹೋಗುವುದು ಬೇಡ. ಎಲ್ಲಾ ಕಡೆ ಟೆಸ್ಟ್ ಮಾಡಿ ಎಂದು ಡಿಮ್ಯಾಂಡ್ ಮಾಡಬೇಡಿ. ಅದನ್ನು ವೈದ್ಯರೇ ತೀರ್ಮಾನಿಸಲಿ ಬಿಡಿ. ಟೆಸ್ಟ್ ಮಾಡಿಸಿ ಎಂದು ಅವರು ಹೇಳಿದರೆ ಮಾತ್ರ ಮಾಡಿಸಿ. ಇಲ್ಲ ಎಂದರೆ ಅವರೇ ನಿಮಗೆ ಮುಂದೆ ಹೇಗಿರಬೇಕೆಂದು ಸಲಹೆ ನೀಡಿ ಕಳಿಸಿಕೊಡುತ್ತಾರೆ.

-ಡಾ. ಕೆ.ಎಸ್. ಸತೀಶ್, ಶ್ವಾಸಕೋಶ ತಜ್ಞರು, ಬೆಂಗಳೂರು

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top