‘ಕೊರೋನಾ’ಜನಕ ಕಥೆಗಳು!

in ಸಿನೆಮಾ ಪುಟ

ಕೊರೋನಾ ಕಾಟಕ್ಕೆ ಇಡೀ ಚಿತ್ರೋದ್ಯಮ ತತ್ತರಿಸಿ ಹೋಗಿದೆ. ಕೊರೋ‌ನಾಗೆ ಸಂಬಂಧಿಸಿದಂತೆ ಸಿನೆಮಾ ನಟರೆಲ್ಲಾ ಸೇರಿ ಒಂದಷ್ಟು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕೂಡ ಕೈ ಜೋಡಿಸಿದ್ದಾರೆ. ಯೋಗರಾಜ್ ಭಟ್, ಪವನ್ ಒಡೆಯರ್ ಮೊದಲಾದವರು ಕೊರೋನಾ ವಿರುದ್ಧ ಹೋರಾಡುವ ಹಾಡುಗಳನ್ನು ರೆಡಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸುದ್ದಿ ಮಾಡಿದ್ದಾರೆ. ನಿರ್ದೇಶಕ ನಾಗೇಂದ್ರ ಅರಸ್ ಕೊರೋನಾ ಸಂಬಂಧಿತ ಸ್ಕ್ರಿಪ್ಟ್ ಒಂದನ್ನ ಮಾಡಿಕೊಂಡುಅದಕ್ಕೆ ‘ಲಾಕ್ ಡೌನ್’ ಎಂದೇ ಹೆಸರಿಟ್ಟಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅತೀ ಶೀಘ್ರದಲ್ಲೇ ಕೊರೋನಾ ಕರಾಳತೆ ಕುರಿತು ಸಿನೆಮಾ ಒಂದನ್ನ ಶುರುಮಾಡುತ್ತೇನೆ ಎಂದು ಓಡಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಕಿರುತೆರೆ ಕಲಾವಿದರೆಲ್ಲಾ ಸೇರಿ ಒಂದಷ್ಟು ಮನರಂಜನಾ ಕಾರ್ಯಕ್ರಮ ಮಾಡುತ್ತಿದ್ದಾರೆ. ನಟ ಸತೀಶ್ ನೀನಾಸಂ ಕೊರೋನಾ ಸಂಬಂಧಿತ ಬರಹ ಇರುವ ಪುಸ್ತಕ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಒಂದಷ್ಟು ಕರೋನಾ ಕುರಿತ ಕಥೆಗಳು, ಚಿತ್ರಕಥೆಗಳು ಗುಟ್ಟು ಗುಟ್ಟಾಗಿಯೇ ತಯಾರಾಗುತ್ತಿದೆ.

Leave a Reply

Your email address will not be published.

*

Latest from ಸಿನೆಮಾ ಪುಟ

Go to Top