ಭೋಪಾಲದ ವೈದ್ಯ ಸುಧೀರ್ ದೆಹಾರಿಯಾ

ವೈದ್ಯರ ಕಷ್ಟ ಕೇಳೋರು ಯಾರು?

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ವೈದ್ಯರ ಕಷ್ಟ ಕೇಳೋರು ಯಾರು?

ಇದು ಇವರೊಬ್ಬರ ಪರಿಸ್ಥಿತಿಯಲ್ಲ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರು, ನರ್ಸ್ ಗಳದ್ದು ಇದೇ ಪರಿಸ್ಥಿತಿ.  ಇವರಲ್ಲವೇ ನಿಜವಾದ ಹೀರೋಗಳು. ಕೊರೋನಾ ವಿರುದ್ಧ ಸಮರಕ್ಕಿಳಿದಿರುವ ಎಲ್ಲ ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಸಲಾಂ.

ವೈದ್ಯರನ್ನು ದೇವರಿಗೆ ಹೋಲಿಸುವುದು ಇಂಥ ಕಾರಣಗಳಿಗೆ. ಕೊರೋನಾ ಎಂಬ ಹೆಮ್ಮಾರಿ ವಿರುದ್ಧ ಇಡೀ ವೈದ್ಯಲೋಕ ಹೋರಾಡುತ್ತಿದೆ. ತಮ್ಮ ಕೌಟುಂಬಿಕ ಸುಖಗಳನ್ನು ದೂರವಿರಿಸಿ ದೊಡ್ಡ ಮಟ್ಟದಲ್ಲಿ ಕರ್ತವ್ಯಪ್ರಜ್ಞೆ ಮೆರೆಯುತ್ತಿದ್ದಾರೆ ಡಾಕ್ಟರ್ಸ್. ಸರಿಯಾದ ಸಮಯಕ್ಕೆ ಅನ್ನ ನೀರು ಸೇವಿಸದೆ ರೋಗಿಗಳ ಶುಶ್ರೂಷೆಗೆ ನಿಂತಿದ್ದಾರೆ. ತಮ್ಮ ಮನೆಗಳಿಗೂ ಹೋಗುತ್ತಿಲ್ಲ. ಇದಕ್ಕೆ ಒಂದು ಉದಾಹರಣೆ ಅಂದರೆ ಭೋಪಾಲದ ವೈದ್ಯ ಸುಧೀರ್ ದೆಹಾರಿಯಾ. ಅವರು ಭೋಪಾಲದ ಸಿಎಂಎಚ್ ಓ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮನೆಯವರನ್ನು ನೋಡಲು ಹೋಗಿದ್ದರು. ಆದರೆ ಮನೆಯೊಳಕ್ಕೆ ಹೋಗಲಿಲ್ಲ. ಗೇಟ್ ಬಳಿಯೇ ಕೂತಿದ್ದು ಟೀ ಕುಡಿದು ತಮ್ಮ ಹೆಂಡತಿ ಮಕ್ಕಳನ್ನು ಮಾತನಾಡಿಸಿಕೊಂಡು ವಾಪಸ್ ಸೇವೆಗೆ ತೆರಳಿದರು. ಇದು ಇವರೊಬ್ಬರ ಪರಿಸ್ಥಿತಿಯಲ್ಲ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರು, ನರ್ಸ್ ಗಳದ್ದು ಇದೇ ಪರಿಸ್ಥಿತಿ.  ಇವರಲ್ಲವೇ ನಿಜವಾದ ಹೀರೋಗಳು. ಕೊರೋನಾ ವಿರುದ್ಧ ಸಮರಕ್ಕಿಳಿದಿರುವ ಎಲ್ಲ ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಸಲಾಂ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top