ಹಾಯ್ ಬೆಂಗಳೂರ್

ಕೇಳಿ: ಕೆಲವು ಕಾಲೇಜು ಹುಡುಗೀರು, ಹುಡುಗರ ಬದಲು ಮೇಷ್ಟ್ರುಗಳನ್ನೇ ಇಷ್ಟಪಡಲು ಕಾರಣ?

ಕೇಳಿ:

ಕೆಲವು ಕಾಲೇಜು ಹುಡುಗೀರು, ಹುಡುಗರ ಬದಲು ಮೇಷ್ಟ್ರುಗಳನ್ನೇ ಇಷ್ಟಪಡಲು ಕಾರಣ?

 • ಹಿಮಾದ್ರಿ ಶಂಕರ್, ಬೆಂ. ೮೬
 • ಮದುವೆಗೆ ಮುನ್ನ ರಹಸ್ಯವಾಗಿ ಪ್ರಿಯಕರನನ್ನ, ಮದುವೆಯ ನಂತರ ಗಂಡನಿಗೆ ಗೊತ್ತಾಗದ ಹಾಗೆ ತಂದೆ ತಾಯಿಯರನ್ನ ನೋಡುವ ಸ್ಥಿತಿ ಹೆಣ್ಣಿಗೇಕೆ?

* ಸದ್ಯ, ಮಕ್ಕಳು ದೊಡ್ಡವರಾದ ಮೇಲೆ ಗಂಡನನ್ನು ರಹಸ್ಯವಾಗಿ ನೋಡುವ ಸ್ಥಿತಿ ಬರದಿದ್ದರಾಯಿತು!

 • ಎಚ್. ಎಸ್. ಸುರೇಶ್, ಹಲಗೂರು
 • ಒಳ್ಳೆ ಹುಡುಗಿಯರನ್ನು ಗುರುತಿಸುವುದು ಹೇಗೆ ಸಾರ್!

* ದೇಶಭಕ್ತಿಗೀತೆಗಳಂತೆ ತೆಳ್ಳಗೆ ಸಪ್ಪಗೆ ಇರುತ್ತಾರೆ!

 • ಕಣತೂರು ಮಂಜುನಾಥ್, ಮಾಯಸಂದ್ರ
 • ಇಲ್ಲೊಬ್ಬಳು ನೆಲೆ ಇಲ್ಲದೆ ಅಲೆಯುತ್ತಿದ್ದಾಳೆ. ನೆಲೆ ಕೊಡಲಾ?

* ಸರಿಯಾಗಿ ತಿಳಿಸು- ಹಿನ್ನೆಲೆಯೋ? ಮುನ್ನೆಲೆಯೋ?

 • ಸ್ಟಾಲಿನ್, ಹಳೇಗುಡ್ಡದಹಳ್ಳಿ
 • ಪ್ರೀತಿ ಮಾಡೋದೇ ತಪ್ಪಾ?

* ಎಷ್ಟೊತ್ತಿನಲ್ಲಿ?

 • ಗೋಪಾಲ ಫಿರಂಗಿ, ಶಹಾಪೂರ
 • ಮೊದಲ ಬಾರಿಗೆ ಕನ್ಯೆ ನೋಡಲು ಹೋದಾಗ ನನಗೆ ಮುಜುಗುರವಾಗಲು ಕಾರಣ?

* ನಿನ್ನ ಸರ್ ನೇಮು!

 • ಶ್ರೀನಿವಾಸ, ಕೆಂಗೇರಿ
 • ಒಬ್ಬ ಮನುಷ್ಯ ಎಷ್ಟು ಕ್ರಿಯಾಶೀಲನಾಗಿರಬಲ್ಲ?

* ಕ್ರಿಯೆ ಚೆನ್ನಾಗಿದ್ದರೆ ಶೀಲದ್ದೇನೂ ಅಂಥ  ಸಮಸ್ಯೆಯಲ್ಲ!

 • ಬಿ.ಎಂ. ಭಾಗ್ಯಗೌಡ, ಬಿನ್ನಡಿ
 • ಅಳುವ ಮಗುವನ್ನಾದರೆ ಎತ್ತಿಕೊಳ್ಳಬಹುದು, ಅಳುವ ಹುಡುಗನನ್ನು?

* ಕೆಡವಿ ಜೋಗುಳ ಹಾಡುವುದೊಂದೇ ದಾರಿ!

 • ನೆಲ್ಲಿಕಟ್ಟೆ ಸಿದ್ದೇಶ್, ಬಿ.ಆರ್. ಪ್ರಾಜೆಕ್ಟ್
 • ನಾವೇ ಮಾಡಿದ ಮಣ್ಣಿನ ಗಣಪತಿಗೆ ಪೂಜೆ ಯಾಕೆ ಮಾಡಬೇಕು?

* ನಾವೂ ಮಾಡದಿದ್ರೆ ಅವನ ಗತಿ?

 • ಬಿ.ಆರ್. ಮಂಜುನಾಥ್, ಬೆಳಗೆರೆ
 • ಕೆಲವು ಕಾಲೇಜು ಹುಡುಗೀರು, ಹುಡುಗರ ಬದಲು ಮೇಷ್ಟ್ರುಗಳನ್ನೇ ಇಷ್ಟಪಡಲು ಕಾರಣ?

* ಇಂದಿನ ಮೇಷ್ಟ್ರೇ….. ನಾಳಿನ ಮೇಸ್ತ್ರಿ ಅಂತ ನಂಬಿರಬೇಕು.

 • ಶಿವರುದ್ರಪ್ಪ, ಎಂ.ಸಿ.ಬ್ಲಾಕ್
 • ಸತ್ತವರಿಗೆ ಶಾಸ್ತ್ರ ಮಾಡುವುದೇಕೆ?

* ಅಲ್ಲಾಡದೆ ಮಲಗಿ ಸಹಕರಿಸುತ್ತಾರಾದ್ದರಿಂದ!

 

Leave a Reply

Your email address will not be published. Required fields are marked *