ಹಾಯ್ ಬೆಂಗಳೂರ್

ಸಿಟಿ ಬಸ್ಸುಗಳಲ್ಲಿ ಹುಡುಗಿಯರೇಕೆ ಡ್ರೈವರ್ ಸೀಟಿನ ಹಿಂದೆ ನಿಂತಿರುತ್ತಾರೆ?

ಕೇಳಿ:

 • ಸತೀಶ್ ಬಿಲ್ಲಾಡಿ, ಹೊಸಪೇಟೆ
 • ಊರಿಗೆ ಬಂದೋಳು ನೀರಿಗೆ ಬರಬೇಕು. ಬಂದು?

* ಆಮೇಲಿನ ಜವಾಬ್ದಾರಿ ನಿಂದು!

 • ಸುನೀತಾ ವಿ., ಸಮೇತನಹಳ್ಳಿ
 • ಪ್ರತಿಯೊಂದು ಜೀವಿಯ ಹಿಂದೆ ಸದಾ ಇರುವಂಥದ್ದೇನು?

* ಬೆನ್ನು!

 • ಎಸ್.ವಿ.ಆರ್. ಮುನಿ, ಹಿರಿಯೂರು
 • ಪ್ರೀತಿಯೆನ್ನುವುದು ನಿಧಾನ ವಿಷವಂತೆ ಹೌದಾ?

* ಇರಬಹುದು. ಅಷ್ಟೊಂದು ಅವಸರವಾದರೂ ಯಾತಕ್ಕೆ?

 • ಬಿ. ಚಂದ್ರೇಗೌಡ, ಬೇಗೂರು
 • ಗಂಡ ಹೆಂಡಿರ ನಡುವಿನ ಮುನಿಸನ್ನು ಜಗಳ ಅನ್ನೋದು ನ್ಯಾಯವೇ?

* ಕೆಲವರ ಮನೆಯಲ್ಲಿ ಅದನ್ನು ದಿನಚರಿ ಅಂತಾರೆ!

 • ಕುಣಿಗಲ್ ಸುರೇಶ್, ಬೆಂ. ೨೭
 • ಸಿಟಿ ಬಸ್ಸುಗಳಲ್ಲಿ ಹುಡುಗಿಯರೇಕೆ ಡ್ರೈವರ್ ಸೀಟಿನ ಹಿಂದೆ ನಿಂತಿರುತ್ತಾರೆ?

* ಸ್ಕ್ರೂ ಡ್ರೈವರ್ ಎಂಬ ತಪ್ಪು ಕಲ್ಪನೆಯ ಫಲ!

 • ಸಿ.ಎನ್. ಮಂಜುನಾಥ್, ಚಿಕ್ಕಶೆಟ್ಟಿಕೆರೆ
 • ಮೊದಲ ರಾತ್ರಿಯಂದು ಹೆಂಡತಿ ಹಾಲಿನ ಗ್ಲಾಸು ಹಿಡಿದು ಬರುವುದೇಕೆ?

* ಅವತ್ತಿನ ಮಟ್ಟಿಗೆ ಗ್ಲಾಸಿನಲ್ಲಿ ಮಾತ್ರ ತರಲು ಸಾಧ್ಯ!

 • ಇಂದಿರಾ ತಿಮ್ಮಪ್ಪ, ಕತ್ರಗುಪ್ಪೆ
 • ಮನುಷ್ಯ ಅಲ್ಪಾಯುಷಿ ಅಂತ ತಿಳಿದಿದ್ದರೂ ಕೋಟ್ಯಂತರದ ಆಸ್ತಿ ಮಾಡುವುದೇಕೆ?

* ಅಷ್ಟು ಸ್ವಲ್ಪ ಆಯುಷ್ಯದಲ್ಲಿ ಇನ್ನೇನು ತಾನೇ ಮಾಡಿಯಾನು, ಪಾಪ!

 • ಬಿ.ಜೆ. ಶ್ರೀನಿವಾಸ ಭಟ್, ಬೆಂ – ೪೪
 • ಅಲ್ಪತೃಪ್ತನಾಗಿ ಸ್ವದೇಶದಲ್ಲಿದ್ದರೆ ಒಳಿತೋ, ವಿದೇಶದಲ್ಲಿ ಹಣ ಮಾಡಿ ಹಿಂತಿರುಗಿದರೆ ಒಳಿತೋ?

* ಹಣ ಮಾಡಿದ ಮೇಲೆ ಹಿಂತಿರುಗುವುದೇಕೆ? ಅಲ್ಲೇ ಇದ್ದರೆ ದೇಶಕ್ಕೂ ಒಳಿತು!

 • ಯು. ಪ್ರಶಾಂತ್, ತುಮಕೂರು
 • ರಾಜಕಾರಣಿಗಳಿಗೆ ಡಾಕ್ಟರೇಟ್ ಕೊಡಲು ಕಾರಣವೇನು ರವೀ?

* ಅವರಿಗೆ ಒಟ್ಟಿನಲ್ಲಿ rate ಕೊಟ್ಟರೆ ಸಾಕು!

 • ಮಹ್ಮದ್ ಫಾರೂಕ್ ಪೀರಜಾದೆ, ಗೋಕಾಕ್
 • ಮಗುವಿನ ಮುಗ್ಧತೆ ತಾರುಣ್ಯದಲ್ಲಿ ಮಾಯವಾಗುವುದೇಕೆ?

* ಆಗ ಅದು ಮಗುವನ್ನು ಸೃಷ್ಟಿಸುತ್ತಿರುತ್ತದೆ; ಮುಗ್ಧವಾಗಿ!

 

Leave a Reply

Your email address will not be published. Required fields are marked *