ಐಂದ್ರಿತಾ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದ್ಯಾಕೆ?

in ಲೀಡ್ ನ್ಯೂಸ್/ಸಿನೆಮಾ ಪುಟ
  • ನಟಿ ರಾಗಿಣಿ ಮತ್ತು ಸಂಜನಾಗೆ ಬೆಂಡೆತ್ತಿ ಚಳಿ ಬಿಡಿಸಿರುವ ಸಿಸಿಬಿ ಅಧಿಕಾರಿಗಳ ಕಣ್ಣು ಇದೀಗ ನಟಿ ಐಂದ್ರಿತಾ ರೇ ಮತ್ತು ದೂದ್ ಪೇಡ ದಿಗಂತ್ ಮೇಲೆ ಬಿದ್ದಿದೆ. ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ಸಿಸಿಬಿ ಕಚೇರಿಗೆ ಬನ್ನಿ, ನಿಮ್ಮ ಹತ್ತಿರ ಮಾತನಾಡೋದಿದೆ ಅಂತ ಸಿಸಿಬಿ ಅಧಿಕಾರಿಗಳು ಇವರಿಬ್ಬರಿಗೂ ನೋಟಿಸ್ ನೀಡಿದ್ದಾರೆ.
  • ರಾಗಿಣಿಯ ಜೊತೆ ಐಂದ್ರಿತಾ ರೇ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗ್ತಿದೆ. ಅದರ ಕುರಿತಾದ ದಾಖಲೆಗಳು ಕೂಡ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಆದರೆ ಐಂದ್ರಿತಾ ರೇ ಮತ್ತು ದಿಗಂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರಾ ಅಥವಾ ಡ್ರಗ್ ಪೆಡ್ಲರ್ ಗಳ ಜೊತೆಗೆ ಕೇವಲ ಸಂಪರ್ಕ ಹೊಂದಿದ್ದರಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
  • ಈ ಮಧ್ಯೆ ನಟಿ ಐಂದ್ರಿತಾ ರೇ ಮತ್ತು ನಾನಾ ವಿಧದ ದಂಧೆಗಳಲ್ಲಿ ಎತ್ತಿದ ಕೈ ಎನಿಸಿಕೊಂಡಿರೋ ದಂಧೆಕೋರ ಶೇಖ್ ಫಾಜಿಲ್ ಜೊತೆ ಜೊತೆಗೆ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ರಾ ಎಂಬ ಪ್ರಶ್ನೆ ಮೂಡಿದೆ. ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ ಆಕೆ ಫಾಜಿಲ್ ಜೊತೆಗೆ ಫೊಟೋಗಳನ್ನು ತೆಗೆಸಿಕೊಂಡಿರುವುದು ಕೂಡ ಸಿಸಿಬಿ ಅಧಿಕಾರಿಗಳ ಬಳಿ ಇದೆ.
  • ಈಗಾಗಲೇ ನಟಿಮಣಿಯರಾದ ರಾಗಿಣಿ ಮತ್ತು ಸಂಜನಾಗೆ ಗ್ರಿಲ್ ಮೇಲೆ ಗ್ರಿಲ್ ಮಾಡಿ ಹೈರಾಣಾಗಿಸಿರುವ ಖಡಕ್ ಕಾಪ್ ಗಳು  ದೂದ್ ಪೇಡ ದಿಗಂತ್ ಮತ್ತು ಐಂದ್ರಿತಾ ರೇಗೆ ಖೆಡ್ಡಾ ತೋಡಿಯೇ ನೋಟಿಸ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
  • ನಾಳೆ ಒಂದು ವೇಳೆ ಹನ್ನೊಂದು ಗಂಟೆಗೆ ಐಂದ್ರಿತಾ ಮತ್ತು ದಿಗಂತ್ ಸಿಸಿಬಿ ಕಚೇರಿಗೆ ಹಾಜರಾಗದಿದ್ದರೆ ಏನಾಗುತ್ತದೆ?ರಾಗಿಣಿ ಮತ್ತು ಸಂಜನಾಗೆ ಏನಾಯಿತೋ ಅದೇ ಆಗುತ್ತದೆ.
  • ರಾಗಿಣಿ ಮತ್ತು ಸಂಜನಾ ಕೂಡ ಸಿಸಿಬಿ ನೀಡಿದ ನೋಟಿಸನ್ನು ಲೆಕ್ಕಿಸದೆ ಅತೀ ಬುದ್ಧಿವಂತಿಕೆ ತೋರಿಸಲು ಪ್ರಯತ್ನ ಪಟ್ಟು ಕಡೆಗೆ ತಮ್ಮ ಖೆಡ್ಡಾವನ್ನು ತಾವೇ ತೋಡಿಕೊಂಡರು. ನೋಟಿಸ್ ಲೆಕ್ಕಿಸದೇ ಇದ್ದರೆ ಇವರಿಗೂ ಅದೇ ಗತಿ.
  • ದಿಗಂತ್ ಮತ್ತು ಐಂದ್ರಿತಾ ರೇ ಅದೇ ರೀತಿ ಆಡುತ್ತಾರೋ ಅಥವಾ ಹೇಳಿದ ಸಮಯಕ್ಕೆ ಪೊಲೀಸರ ಮುಂದೆ ಹಾಜರಾಗಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೋ ಕಾದು ನೋಡಬೇಕಿದೆ.

Leave a Reply

Your email address will not be published.

*