ಹಾಯ್ ಬೆಂಗಳೂರ್

ಭಕ್ತರನ್ನು ಸೆಳೆಯಲು ಸಿಗರೇಟು ಸೇದಿಸಿದರು

ಪರಮದೈವ ಭಕ್ತರು ವಿರಾಗಿಗಳೂ ಆದ ಭಂಗಿ ಸೇದುವ ಬಾಬುಗಳು ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯ. ಆದರೆ ಭಕ್ತರನ್ನು ಸೆಳೆಯಲು ಸಿಗರೇಟು ಸೇದಿಸಿದ ಅಮೆರಿಕದ ಚರ್ಚ್‌ವೊಂದರ ಇಂಟರೆಸ್ಟಿಂಗ್ ಕಥೆ ಇದು!

ಅಲ್ಲಿನ ಬಾಸ್ಟನ್ ಬಳಿ ಇರುವ ಕನ್‌ಕಾರ್ಡ್ ಎಂಬ ಹಳ್ಳಿಯಲ್ಲಿ ಸುಮಾರು ಮುನ್ನೂರು ವರ್ಷಗಳ  ಹಿಂದೆ ಕಟ್ಟಿದ ಚರ್ಚ್‌ವೊಂದಿದೆ. ಆ ಹಳ್ಳಿಯ ಜನ ಅದೆಷ್ಟು ಆಸ್ತಿಕರು ಎಂದರೆ, ಚರ್ಚ್ ನವೀಕರಣ, ಹೊಸ ಕಟ್ಟಣ ನಿರ್ಮಾಣ, ಸ್ವಚ್ಛಗೊಳಿಸುವ ಕಾರ್ಯ ಮುಂತಾದ ಕಾರ್ಯಗಳಿಗೆ ಪ್ರತಿವಾರ ಶ್ರಮದಾನ ಮಾಡುತ್ತಿದ್ದರು. ಆದರೆ ೧೯೬೦ರ ಹೊತ್ತಿಗೆ ಶ್ರಮದಾನಕ್ಕೆ ಬರುವ ಭಕ್ತರ ಸಂಖ್ಯೆ ನಿಂತೇಹೋಯಿತು. ಆದರೆ ಪ್ರತಿಯೊಬ್ಬರೂ ನಿಯಮಿತ ಸಮಯಕ್ಕೆ ಚರ್ಚ್‌ಗೆ ಹಣದ ರೂಪದಲ್ಲಿ ತಮ್ಮ ದೇಣಿಗೆ ನೀಡುತ್ತಿದ್ದರು. ಇದರಿಂದ ಚಿಂತೆಗೆ ಬಿದ್ದ ಬಿಷಪ್‌ಗಳಿಗೆ ಚಿಂತೆಯ ಜೊತೆ ಸೋಜಿಗ ಕೂಡ ಉಂಟಾಗಿ ಸಭೆ ಸೇರಿ ಭಕ್ತಿ ಇದ್ದರೂ ಹಳ್ಳಿಗರು ಚರ್ಚ್‌ಗೆ ಬರದಿರಲು ಕಾರಣ ಹುಡುಕತೊಡಗಿದಾಗ ಅವರಿಗೆ ಪರಿಹಾರವೂ ಹೊಳೆಯಿತು. ಚರ್ಚ್ ಆವರಣದಲ್ಲಿ ಸಿಗರೇಟು ಸೇವನೆ ನಿಷೇಧಿಸಿದ್ದೇ ಭಕ್ತರ ಗೈರು ಹಾಜರಿಗೆ ಕಾರಣವಾಗಿತ್ತು. ತಕ್ಷಣವೇ ಜಾಗೃತಗೊಂಡ ಬಿಷಪ್‌ಗಳು “ಈ ಚರ್ಚ್‌ನಲ್ಲಿ ಸಿಗರೇಟು, ಧೂಮಪಾನಕ್ಕೆ ಅವಕಾಶ ಉಂಟು” ಎಂಬ ಬೋರ್ಡು ನೇತು ಹಾಕಿದರು. ಫಲಿತಾಂಶ ಹೇಗಿತ್ತೆಂದರೆ ಪ್ರತಿ ಭಾನುವಾರ ಶ್ರಮದಾನಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಹೆಚ್ಚಿ, ಕೊನೆಗೆ  ಸ್ಥಳಾವಕಾಶ ಸಾಲದೇ ಹೋಯಿತು. ಕೆಲವೇ ವರ್ಷದಲ್ಲಿ ಚರ್ಚ್‌ನ ಕಟ್ಟಡಗಳ ವಿಸ್ತರಣೆಯೂ ಆಯಿತು.

Leave a Reply

Your email address will not be published. Required fields are marked *