ಹಾಯ್ ಬೆಂಗಳೂರ್

ಬದುಕೆಂದರೆ ಹೀಗೆಯೇ..

ಬದುಕೆಂದರೆ ಹೀಗೆಯೇ..

ದುಕೆಂದರೆ ಹೀಗೆಯೇ  ಅಲೆಗಳುಂಗುರ
ಒಮ್ಮೆ ಒಂಟಿತನ ಮಗದೊಮ್ಮೆ ಸಂತೆಯಾಗರ
ಅಂದೊಮ್ಮೆ ಖಾಲಿತನ ಮತ್ತೆಂದೊ ಸುಖ ಸಾಗರ
ಜಾರುವಲೆಗಳ ಮಧ್ಯ ದಡ ಸೇರುವ ಕಾತರ
ದುಡುಕಿ ಕೊಸರಾಡಿ ಒಂದರ ಮೇಲೊಂದು ಬಿದ್ದು
ಬಯಸಿದ ಸಂಸಾರ ಸಾಗರವ ಮೈಮೇಲೆ ಹೊದ್ದು
ಅಲ್ಲಿಗಲ್ಲಿಗೆ ಹಾದಿ ತಪ್ಪಿಸುವ ಭಾರ ಹೆಜ್ಜೆಗಳ ಗುದ್ದು
ಎಲ್ಲಿಹುದು ಇವೆಲ್ಲವ ಮೀರಿ ಮೆರೆಸುವ ಮದ್ದು
ಭರವಸೆಯ ಚಂದಿರನು ಕಂಡರದೆಂತಹ ಉಕ್ಕು
ಬೆಳಕಿನಧಿಪತಿಯೇ ಮಣಿದನಲ್ಲನೆಂಬ ಸೊಕ್ಕು
ಮರೆತುಬಿಡು ಕ್ಷಣಿಕವದು ಬೆಳದಿಂಗಳೆಂದು ನಕ್ಕು
ಅರಿತು ಏರಿಳಿಯುವ ಕರ್ಮವದುವೆ ಹಾಸುಹೊಕ್ಕು
ಬೀಗದಿರು ಹೊಸನೀರಿನಿಂ ಮೈದುಂಬಿತೆಂದು
ಗಾಳಿಯಿಂದಲ್ಲವೇ ಹಣೆಬರಹ ಬರೆಯುವುದಿಂದು
ಸಖ್ಯ ತೊರೆದು ಹಂಬಲಿಸದಿರು ಕ್ಷಣಕ್ಷಣದಿ ಬೆಂದು
ಹೆಜ್ಜೆಯಿಡು ಸಹನೆಯಿಂ ಯೋಚಿಸಿ ಹಿಂದು- ಮುಂದು
ಬಲಿಯಾಗದಿರು ಕರೆಯಿತೆಂದು ಮೋಹನ ಮುರಳಿ
ಬಲೆ ಬೀಸಿ ನಗುವದಲ್ಲಿ ಮರ ಮರಳಿ ಹೊರಳಿ
ಗುರಿಯಿಹುದು ಮೈಚೆಲ್ಲು ಜಾಗ್ರತೆಯಿಂದರಳಿ
ಕೈಸೋತವೆನ್ನದಿರು ಈ ಕಡಲ ಮಧ್ಯದಿ ನರಳಿ
ಪ್ರೊ.ಚಂದ್ರಶೇಖರ ಹೆಗಡೆ,
ಕನ್ನಡ ಸಹಾಯಕ ಪ್ರಾಧ್ಯಾಪಕರು,

Leave a Reply

Your email address will not be published. Required fields are marked *