ಹಾಯ್ ಬೆಂಗಳೂರ್

ಅವಳು ಉತ್ತರಿಸಬೇಕಾದ ಅವಶ್ಯಕತೆ ಇದೆಯೇ?

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-21

ಅವಳು ಉತ್ತರಿಸಬೇಕಾದ ಅವಶ್ಯಕತೆ ಇದೆಯೇ?

ಅವಳು ಉತ್ತರಿಸಬೇಕಾದ ಅವಶ್ಯಕತೆ ಇದೆಯೇ? ಎಂಬುದು ನಾಲ್ಕನೆಯ ಹಂತದಲ್ಲಿ ಇದಿರಾಗುವ ಪ್ರಶ್ನೆ. ನೀವು ಹುಡುಗಿಯನ್ನು ನೋಡಿ, ಆಕರ್ಷಿತರಾಗಿ, ಸಾವಿರಾರು draftಗಳ ನಂತರ ಒಂದು ಪತ್ರವನ್ನು finalise ಮಾಡಿ, ನೂರಾರು ವಿಧಾನಗಳ ಮಧ್ಯೆ ಒಂದು ವಿಧಾನ ಉಪಯೋಗಿಸಿ ಅವಳಿಗದನ್ನು ತಲುಪಿಸಿಯೂ ಬಿಡುತ್ತೀರೆಂದಿಟ್ಟುಕೊಳ್ಳಿ. ‘‘ನಾನು ನಿನ್ನನ್ನು ಪ್ರೀತಿಸ್ತೇನೆ. ನೀನು? ನಿನಗಿದಕ್ಕೆ ಸಮ್ಮತಿ ಇದೆಯಾ?’’ ಎಂಬ ಪ್ರಶ್ನೆಯನ್ನು ಅವಳೆದುರಿಗಿಡುತ್ತೀರಿ.

ಇದೇ ಎಲ್ಲ ಪ್ರೇಮಿಗಳ ಜೀವನದಲ್ಲೂ ಅತ್ಯಂತ ಸಂಕಟಮಯವಾದ ಘಳಿಗೆ! ಅವಳೇನನ್ನುತ್ತಾಳೋ? ಅವಳು ‘ಉಹುಂ’ ಅಂದುಬಿಟ್ಟರೆ? ಪತ್ರ ಇಸಿದುಕೊಳ್ಳಲು ಕೈಯೇ ಚಾಚದಿದ್ದರೆ? ಪತ್ರವನ್ನು ಓದದೆಯೇ ಹರಿದು ಹಾಕಿದರೆ? ತನ್ನ ಗೆಳತಿಗೆ ತೋರಿಸಿ ಬಿಟ್ಟರೆ? ಮರುದಿನದ ಅಂಚೆಯಲ್ಲಿ ಅದು stamp ಸಮೇತ ವಾಪಸು ಬಂದರೆ?

ಇವೆಲ್ಲ ಪ್ರಶ್ನೆಗಳು ಕಡೇ ಪಕ್ಷ ಒಂದು ರಾತ್ರಿಯ ಮಟ್ಟಿಗಾದರೂ ನಿಮ್ಮನ್ನು ಕಾಡದೆ ಇರುವುದಿಲ್ಲ. ಇವೆಲ್ಲಕ್ಕಿಂತ ದೊಡ್ಡ ಸಮಸ್ಯೆಯೆಂದರೆ;

ಇಷ್ಟಕ್ಕೂ, ನಿಮ್ಮ proposalಗೆ ತಕ್ಷಣ ಉತ್ತರಿಸಲು ‘‘ನೀವು’’ ಮಾಡಿದ್ದಾದರೂ ಏನಿದೆ? ನೀಟಾಗಿ ಕ್ರಾಪು ಬಾಚಿಕೊಂಡು, ಸರಿಯಾಗಿ ಅವಳು ಕಾಲೇಜಿಗೋ, ಕಂಪ್ಯೂಟರ್ ಕ್ಲಾಸಿಗೋ ಹೊರಡುವ ಹೊತ್ತಿಗೆ ಅವಳ ಮನೆಯೆದುರು ಹಾಜರಾಗಿ, ಅವಳನ್ನು ಬೆಂಬಿಡದೆ shadow ತರಹ ಫಾಲೋ ಮಾಡಿದ್ದು ಬಿಟ್ಟರೆ ಇನ್ನೇನು ಮಾಡಿದ್ದೀರಿ? ನಿಮ್ಮ ಪರಿಚಯ, ವ್ಯಕ್ತಿತ್ವದ ಅವಗಾಹನೆ, ನಿಮ್ಮ ಯೋಚನಾ ವಿಧಾನ, ನಿಮ್ಮ ಅಂತರಂಗದ dignity-ಒಂದೂ ಗೊತ್ತಿಲ್ಲದೆ ಹುಡುಗಿ ಈ ಪ್ರೇಮಪತ್ರಕ್ಕೆ answer ಮಾಡು ಅಂದ್ರೆ ಏನಂತ ಉತ್ತರಿಸಿಯಾಳು? poor girl. ಅವಳ ತಪ್ಪೇನೇನೂ ಇಲ್ಲ.

ಅವಳು ನಿಮ್ಮ proposalಗೆ ಉತ್ತರಿಸದೇನೇ ಇದ್ದುಬಿಟ್ಟರೆ?

ಅಸಲಿ ಸಮಸ್ಯೆಯೇ ಅದು. ಮತ್ತು ಪ್ರೇಮಪತ್ರ ಒಯ್ದು ಕೊಟ್ಟಾಗ ಹಾಗಾಗುವ ಛಾನ್ಸೇ ಜಾಸ್ತಿ! ಹುಡುಗಿಯರಲ್ಲಿ ಹೆಚ್ಚಿನವರು ಒಂದಿಷ್ಟೂ response ಕೊಡದೆ ಸುಮ್ಮನಾಗಿ ಬಿಡುತ್ತಾರೆ. ಫೋನ್ ಮಾಡಿದರೆ ನಿಮ್ಮ ದನಿ ಕೇಳಿದ ತಕ್ಷಣ ರಿಸೀವರ್ ಇಟ್ಟು ಬಿಡುತ್ತಾರೆ. ಮನೆ ಹತ್ತಿರಕ್ಕೆ ಹೋದರೆ ಬಾಗಿಲ ಹಿಂದೆ ಮರೆಯಾಗುತ್ತಾರೆ. ನಿಮ್ಮೆಲ್ಲ ಪ್ರಯತ್ನಗಳೂ ಸೋಲುವಂತೆ ಮಾಡುತ್ತಾರೆ. ಏಕೆ ಗೊತ್ತೆ?

ಅವರಿಗೆ ಹಾಗೆ ಮಾಡುವಂತೆ ತರಬೇತಿ ನೀಡಲಾಗಿದೆ!

ನಿಜ. They are trained for that. ಪ್ರೇಮಪತ್ರ ಇಸಿದುಕೊಂಡದ್ದೇ ಮಹಾ ತಪ್ಪು. ಅವನೆಡೆಗೆ ನೋಡಿದ್ದು ಹಾದರಕ್ಕೆ ಸಮಾನ. ಮುಗುಳ್ನಕ್ಕಿದ್ದಂತೂ ಬಸಿರಾದಷ್ಟೇ ಅಪಾಯಕಾರಿ. ಇನ್ನು ಅವನ ಪತ್ರಕ್ಕೆ ಉತ್ತರ ಕೊಟ್ಟೆಯೋ… ನಿನ್ನ ಕಥೆ ಮುಗೀತು-ಎಂಬುದಾಗಿ ಪ್ರತಿ ಹುಡುಗಿಗೂ ಅವಳ ತಾಯಿ, ತಂದೆ, ಅಕ್ಕಂದಿರು, ಗೆಳತಿಯರು, ಸಮಾಜ, ಸಂಚಿ ಹೊನ್ನಮ್ಮಗಳು ಅನಸೂಯ-ಸಕ್ಕೂಬಾಯಿಯಂತಹ ಪತಿವ್ರತೆಯರು-ಎಲ್ಲರೂ ಸೇರಿಕೊಂಡು ಚಿಕ್ಕಂದಿನಿಂದಲೇ ವ್ಯವಸ್ಥಿತವಾಗಿ train-up ಮಾಡಿಬಿಟ್ಟಿರುತ್ತಾರೆ. ಅವರ ಪಾಲಿಗದು ಹದಿನೆಂಟು ಸುದೀರ್ಘ ವರ್ಷಗಳ ತರಬೇತಿಯಾಗಿಬಿಟ್ಟಿರುತ್ತದೆ. ಹಾಗಿರುವಾಗ, ನೀವು (so-called ಸುಂದರಾಂಗ) ಹದಿನೆಂಟು ದಿನಕೂಡ ಸರಿಯಾಗಿ ನೋಡದೆ ‘‘ಗುಣ ಮುಖ್ಯ’’ ಎಂದು ನಿರ್ಧರಿಸಿ ಒಂದು ಪ್ರೇಮಪತ್ರವನ್ನು ಅವಳಿಗೆ ಜಾರಿ ಮಾಡಿ 24 ಗಂಟೆಯೊಳಗಾಗಿ ಇದಕ್ಕೆ ಉತ್ತರ ಕೊಡು ಅಂತ ಕೂತುಬಿಟ್ಟರೆ-ಅವಳಾದರೂ ಏನು ಮಾಡಿಯಾಳು ಬ್ರದರ್?

ಅವಳನ್ನು ನಿಂದಿಸಿ ಫಲವಿಲ್ಲ. ಪ್ರೀತಿಯುಂಟಾದರೂ, ಆಸೆಯ ಅಲೆಯೆದ್ದು ಬಂದರೂ ಅವಳು ಬಾಗಿಲು ತೆರೆಯಲಾರಳು. ಸುಲಭವಾಗಿ ಸ್ಪಂದಿಸಲಾರಳು. ಸಲೀಸಾಗಿ ನಿಮ್ಮ ಬೀಜಮಂತ್ರಕ್ಕೆ ‘ಅಸ್ತು’ ಅನ್ನಲಾರಳು. ದಯವಿಟ್ಟು ಅವಳ ಕಷ್ಟ ಅರ್ಥ ಮಾಡಿಕೊಳ್ಳಿ. ಸುಮ್ಮನೆ ದೂಷಿಸಬೇಡಿ.

ಇಷ್ಟಕ್ಕೂ, ನಿಮ್ಮ proposalಗೆ ತಕ್ಷಣ ಉತ್ತರಿಸಲು ‘‘ನೀವು’’ ಮಾಡಿದ್ದಾದರೂ ಏನಿದೆ? ನೀಟಾಗಿ ಕ್ರಾಪು ಬಾಚಿಕೊಂಡು, ಸರಿಯಾಗಿ ಅವಳು ಕಾಲೇಜಿಗೋ, ಕಂಪ್ಯೂಟರ್ ಕ್ಲಾಸಿಗೋ ಹೊರಡುವ ಹೊತ್ತಿಗೆ ಅವಳ ಮನೆಯೆದುರು ಹಾಜರಾಗಿ, ಅವಳನ್ನು ಬೆಂಬಿಡದೆ shadow ತರಹ ಫಾಲೋ ಮಾಡಿದ್ದು ಬಿಟ್ಟರೆ ಇನ್ನೇನು ಮಾಡಿದ್ದೀರಿ? ನಿಮ್ಮ ಪರಿಚಯ, ವ್ಯಕ್ತಿತ್ವದ ಅವಗಾಹನೆ, ನಿಮ್ಮ ಯೋಚನಾ ವಿಧಾನ, ನಿಮ್ಮ ಅಂತರಂಗದ dignity-ಒಂದೂ ಗೊತ್ತಿಲ್ಲದೆ ಹುಡುಗಿ ಈ ಪ್ರೇಮಪತ್ರಕ್ಕೆ answer ಮಾಡು ಅಂದ್ರೆ ಏನಂತ ಉತ್ತರಿಸಿಯಾಳು? poor girl. ಅವಳ ತಪ್ಪೇನೇನೂ ಇಲ್ಲ.

-ರವಿ ಬೆಳಗೆರೆ

Leave a Reply

Your email address will not be published. Required fields are marked *