ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-೧೦

ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-೧೦

ನನ್ನ ಆಯ್ಕೆ ಸರಿಯೇ?

“ನನ್ನ ಆಯ್ಕೆ ಸರಿಯೇ?” ಎಂಬುದು ಒಂದು ಉಪಪ್ರಶ್ನೆ. ಇದನ್ನು ಕೂಡ ಅನೇಕ ಹುಡುಗರು ಪ್ರೇಮದ ಆರಂಭದಲ್ಲಿ ತಮ್ಮಲ್ಲಿ ತಾವು ಕೇಳಿಕೊಂಡಿರುವುದಿಲ್ಲ. ಈಗಾಗಲೇ ಪ್ರೀತಿಯ ಸೆಳೆತಕ್ಕೆ ಬಿದ್ದ ನೂರು ಜನ ಹುಡುಗರನ್ನು ಒಂದೆಡೆ ಕೂಡಿಸಿ, “ನೀನು ಅವಳನ್ನೇ ಏಕೆ ಪ್ರೀತಿಸಿದೆ”? ಅಂತ ಕೇಳಿ ನೋಡಿ.

ಅವಳ ಕಣ್ಣು ಚೆನ್ನಾಗಿವೆ, ಅವಳ ಗುಣ ಹಿಡಿಸಿತು, ಅವಳ ಸೌಂದರ್ಯಕ್ಕೆ ಮರುಳಾದೆ….. ಹಾಳುಮೂಳು…. ಇಂಥ ಉತ್ತರಗಳೇ ಎದುರಾಗುತ್ತವೆ. ಆ ನೂರು ಜನರ ಪೈಕಿ ಒಬ್ಬನ್ಯಾವನನ್ನಾದರೂ ಪಕ್ಕಕ್ಕೆ ಕರೆದುಕೊಂಡು ಹೋಗಿ ಇನ್ನಷ್ಟು ಸ್ಪಷ್ಟವಾಗಿ ಉತ್ತರಿಸಲು ಹೇಳಿ;

“ಅವಳು ನನ್ನ ಬಗ್ಗೆ ಆಕರ್ಷಣೆ ತೋರಿಸಿದಳು. ಹೀಗಾಗಿ ನಾನೂ ಪ್ರೀತಿಸಿದೆ!” ಎಂಬ ಪ್ರಾಮಾಣಿಕ ಉತ್ತರ ಬರುತ್ತದೆ.

ಬಿಲೀವ್ ಮಿ, ಹದಿಹರೆಯದಲ್ಲಿ ಅರಳುವ ಪ್ರೀತಿಗಳಲ್ಲಿ ನೂರಕ್ಕೆ ನೂರು ಇದೇ ಕಾರಣಕ್ಕಾಗಿಯೇ ಉದ್ಭವವಾಗಿರುತ್ತವೆ. ಆತನಕ ಉಳಿದ್ಯಾವ ಹೆಂಗಸರನ್ನೂ ಸಮೀಪದಿಂದ ನೋಡಿರದ ಹುಡುಗ, ಹುಡುಗಿಯೊಬ್ಬಳು ತನ್ನನ್ನು ನೋಡುತ್ತಿದ್ದಾಳೆ ಎಂಬ ಮಾಮೂಲಿ ಸಂಗತಿಗೇನೇ thrill ಆಗಿ ಬಿಡುತ್ತಾನೆ. ಅವಳ ನೋಟವನ್ನೇ ಪ್ರೇಮವೆಂದುಕೊಳ್ಳುತ್ತಾನೆ. ಆಮೇಲೆ ತಮ್ಮ ಸಂಬಂಧವನ್ನು ಬಿಡಿಸಲಾಗದ ದಿವ್ಯಾನುಬಂಧವೆಂದೋ, ಜನ್ಮಜನ್ಮದ ಋಣಾನು ಸಂಬಂಧವೆಂದೋ ಆರೋಪಿಸಿಕೊಂಡು ನಿಧಾನವಾಗಿ ಅದನ್ನೆಲ್ಲ ನಂಬತೊಡಗುತ್ತಾನೆ.

Bull shit.

-ರವಿ ಬೆಳಗೆರೆ

Leave a Reply

Your email address will not be published. Required fields are marked *