ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ? : ಹೆಣ್ಣು ಕಾಣದ ಗಾವಿಲ

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?:
  • ಅಧ್ಯಾಯ-೧೧

ಹೆಣ್ಣು ಕಾಣದ ಗಾವಿಲ

ಅದ್ಯಾವುದೂ ಸತ್ಯವಲ್ಲ. ಈ ಹೆಣ್ಣು ಕಾಣದ ಗಾವಿಲ, ತನ್ನನ್ನೊಬ್ಬ ಹುಡುಗಿ ನೋಡಿದಳು ಎಂಬ ಒಂದೇ ಕಾರಣದಿಂದಾಗಿ `ಬೋಲ್ಡ್’ ಆಗಿಬಿಟ್ಟ. ಅವಳು ಮಾತಾಡಿಸಿದ್ದೇ ತನ್ನ ಸೌಭಾಗ್ಯವೆಂದುಕೊಂಡ. ಅವಳು ಸಿಕ್ಕುಬಿಟ್ಟರೆ ಜನ್ಮ ಪಾವನವಾಗುತ್ತದೆಂದುಕೊಂಡ. ಇದೆಲ್ಲ ತಪ್ಪು ತಿಳುವಳಿಕೆ `ಮದುವೆ’ಯೆಂಬ ಅನಾಹುತದಲ್ಲಿ ಪರ್ಯವಸಾನಗೊಳ್ಳುತ್ತಿದ್ದರೆ ಈ ದಡ್ಡ, ಹೊಸ ಬಟ್ಟೆ ಹೊಲೆಸಿಕೊಂಡು ಹೋಗಿ ಹಳ್ಳಕ್ಕೆ ಬಿದ್ದ! Once again,  ಪ್ರೇಮ ವಿವಾಹವಾದ ಜೋಡಿಗಳ ಪೈಕಿ ಕೆಲವರನ್ನು ನಿಲ್ಲಿಸಿ ಕೇಳಿ, ಅವರು ತಮ್ಮ ದಡ್ಡತನವನ್ನು confidential ಆಗಿಯಾದರೂ ಒಪ್ಪಿಕೊಳ್ಳುತ್ತಾರೆ.

ಕೇವಲ ಅಪ್ಪ ಅಮ್ಮನ ರಕ್ಷಣೆಯಲ್ಲಿ, ಅದರಲ್ಲೂ ಹುಡುಗರ ಶಾಲೆ-ಕಾಲೇಜುಗಳಲ್ಲಿ, ಗರ್ಲ್ ಫ್ರೆಂಡ್ಸ್ ಕೂಡ ಇಲ್ಲದೆಯೇ ಬೆಳೆದ ಒಂಟಿಗೋವಿಯಂತಹ ಹುಡುಗರು-ಇಂತಹ ಹಳ್ಳಗಳಿಗೆ ಹಗಲು ಹೊತ್ತೇ ಬೀಳುತ್ತಾರೆ. ಇಪ್ಪತ್ತು ವರ್ಷವಾದರೂ ಸ್ತ್ರೀ ಸಾಮಿಪ್ಯ (I mean, Sex ಸಂಬಂಧಿಯಾದ ಸಾಮಿಪ್ಯವಲ್ಲ)ದ ಅರಿವಿಲ್ಲದವನು ತನ್ನನ್ನು ನೋಡಿ ಹುಡುಗಿಯೊಬ್ಬಳು ನಗುತ್ತಾಳೆ, ಮಾತಿಗೆ ಬರುತ್ತಾಳೆ ಅಥವಾ ಆಸಕ್ತಿ ತೋರಿಸುತ್ತಾಳೆ ಅಂದ ಕೂಡಲೆ ಉಬ್ಬಿ ಹೋಗುತ್ತಾನೆ. ಆಕೆ ನಿಜಕ್ಕೂ ತನಗೆ ಯೋಗ್ಯತೆ ಎಂಬುದನ್ನು ಯೋಚಿಸದೆ ಒಂದು ನಿರ್ಧಾರಕ್ಕೆ ಬಂದುಬಿಡುತ್ತಾನೆ. ಇವಳಿಗಿಂತ ಯೋಗ್ಯಳು, ಪ್ರಬುದ್ಧಳು, ಮಾನಸಿಕವಾಗಿ ಬೆಳೆದವಳು ಸಿಗಬಹುದಲ್ವಾ ಎಂದು ಆತ ಯೋಚಿಸುವುದೇ ಇಲ್ಲ.

ನನ್ನ ಪರಿಚಯದ ವಲಯಗಳಲ್ಲೇ ಇಂತಹ ಪ್ರಕರಣಗಳನ್ನು ಗಮನಿಸಿದ್ದೇನೆ. ತುಂಬ ಬುದ್ಧಿವಂತ, ಪ್ರತಿಭಾವಂತ ಮತ್ತು ಅಸಾಧಾರಣ ಯೋಗ್ಯತೆಗಳಿರುವ ಒಬ್ಬ ಹುಡುಗ ಅವನ ಕ್ಯಾಲಿಬರ್‌ಗೆ ಏನೇನೂ ಸರಿಹೋಗದ, ಮಾಮೂಲು ರೂಪಿನ, ಕಡಿಮೆ ಬುದ್ಧಿವಂತಿಕೆಯ, most ordinary ಹುಡುಗಿಯೊಂದಿಗೆ ಸುತ್ತತೊಡಗುತ್ತಾನೆ. `ಯಾಕಯ್ಯಾ ಹೀಗೆ?’ ಎಂದು ಕೇಳಿದರೆ, “ಪ್ರೀತಿ-ಸೌಂದರ್ಯ ಎರಡೂ ನೋಡೋರ ಕಣ್ಣಲ್ಲಿರ್ತವೆ ಸಾರ್! ರೂಪ ಕಟ್ಕೊಂಡು ಏನು ಮಾಡೋದಿದೆ? ಗುಣ ಮುಖ್ಯ. ಬುದ್ಧಿವಂತಿಕೆಯಿಂದ ಆಗಬೇಕಾದ್ದೇನಿದೆ? ಪ್ರೀತಿ ಮುಖ್ಯ. ಹಿನ್ನೆಲೆ ಕಟ್ಟಿಕೊಂಡು ನನಗೇನಾಗಬೇಕು? ಸಂಸಾರ ಮಾಡೋದು ನಾನೂ -ಅವಳು ತಾನೆ? Most ordinary ಆದ್ರೆ ಏನಾಯ್ತು ಸಾರ್… ನಂಗೆ ಅವಳ್ನ ಕಂಡ್ರೆ ಇಷ್ಟ. ನೀವೇನು ಹೀಗೆ ಹೇಳ್ತಿದೀರಿ…. Most ordinary ಹುಡುಗೀರ್‍ನ ಯಾರೂ ಪ್ರೀತಿಸಲೇ ಬಾರದಾ?” ಎಂದೆಲ್ಲ ಜಗಳಕ್ಕೆ ಬರುತ್ತಾನೆ.

ಆ ಪೆದ್ದನಿಗೆ ಗೊತ್ತಿಲ್ಲ;

Most ordinary ಹುಡುಗಿ ಅವಳಿಗಿಂತಲೂ ordinaryಯಾದವನ ಪಾಲಿಗೆ extra ordinaryಯಾಗಿ ಕಾಣಿಸುತ್ತಾಳೆ. ಈ ಅಸಾಧಾರಣ ಬುದ್ಧಿವಂತನಿಗೆ ಅವಳಿಗಿಂತ ಒಳ್ಳೆಯ ಮ್ಯಾಚ್ ಸಿಗಬಹುದಿತ್ತು. ಸಂಸಾರ ಮಾಡೋದು ಇವನೂ-ಅವಳೇ ಆದರೂ, ಸಂಸಾರವೆಂದರೆ ಇವರಿಬ್ಬರೇ ಅಲ್ಲ! ಅಲ್ಲಿ ಬಾಡಿಗೆ ಮನೆಯ ownerನಿಂದ ಹಿಡಿದು-ಅವಳಿಗಿಂತ ordinaryಯಾದ ಪೆದ್ದ ಮಕ್ಕಳು ಹುಟ್ಟುವ ತನಕ ಸಾವಿರಾರು ಸಂಗತಿಗಳು involve ಆಗಿರುತ್ತವೆ. ಸೌಂದರ್ಯ, ಪ್ರೀತಿಸುವವನ ಕಣ್ಣಲ್ಲಿರುತ್ತವೆಂಬುದು ನಿಜವೇ. ಆದರೆ ಇಲ್ಲದ ಸೌಂದರ್ಯವನ್ನು compensate ಮಾಡುವ ಬುದ್ಧಿವಂತಿಕೆ, cute ಆಗಿರುವಿಕೆ ಅಥವಾ ಮತ್ಯಾವುದೋ ಒಂದು ಗುಣ ಆಕೆಯಲ್ಲಿಲ್ಲದಿದ್ದರೆ-ಆಕೆ ಕೆಲವೇ ದಿನಗಳಲ್ಲಿ ಬೋರ್ ಆಗುತ್ತಾಳೆ. ಬೇಕಾದರೆ ಮದುವೆಯಾಗಿರುವ ಗಂಡಸರನ್ನು ಕೇಳಿನೋಡಿ!

-ರವಿ ಬೆಳಗೆರೆ

 

Leave a Reply

Your email address will not be published. Required fields are marked *