ಹಾಯ್ ಬೆಂಗಳೂರ್

ಅವಳನ್ನು ಒಲಿಸಿಕೊಳ್ಳುವುದು ಹೇಗೆ? : ಒಂದು ಬೊಗಸೆ ಪ್ರೀತಿ

ಅವಳನ್ನು ಒಲಿಸಿಕೊಳ್ಳುವುದು ಹೇಗೆ? ಅಧ್ಯಾಯ-೪

ಒಂದು ಬೊಗಸೆ ಪ್ರೀತಿ

ಡಿಯರ್ ಬಾಯ್ಸ್,

‘I am in love’ ಅಂದಷ್ಟು ಸುಲಭವಲ್ಲ ಪ್ರೀತಿ ಪಡೆಯುವ ಹಾದಿ. ತುಂಬ ಕಷ್ಟಪಟ್ಟು ಎಂಥ ದಡ್ಡನೂ ಒಂದು ಫಸ್ಟ್ ಕ್ಲಾಸ್ ಪಡೆಯಬಹುದು. ಕೊಂಚ ಶ್ರದ್ಧೆಯಿಂದ ಪ್ರಯತ್ನಿಸಿದರೆ, ಜಾಣ ಹುಡುಗನೊಬ್ಬ easyಯಾಗಿ ರ್‍ಯಾಂಕ್ ಗಳಿಸಬಹುದು. ದುಡಿಯುವ ಸಹನೆ ಮತ್ತು ಚೈತನ್ಯಗಳಿದ್ದವನು ಅನಾಯಾಸವಾಗಿ ದುಡ್ಡು ಮಾಡಬಹುದು.

ಆದರೆ, ಏನೇ ಶತಪ್ರಯತ್ನ ಮಾಡಿದರೂ ಒಂದೇ ಒಂದು ಬೊಗಸೆ ಪ್ರೀತಿಯನ್ನು ಪಡೆಯುವುದು ಕಷ್ಟವಾಗಿ ಬಿಡುತ್ತದೆ. ನಮ್ಮೆಲ್ಲ ಆತ್ಮಾಭಿಮಾನ, ಲಜ್ಜೆ, ಪುರುಷ ಸಹಜ ಅಹಂಕಾರ ಹಾಗೂ ಬಿಗುಮಾನಗಳನ್ನೆಲ್ಲ ಬಿಟ್ಟು-ಅವಳ ಮುಂದೆ ಮೊಳಕಾಲೂರಿ ಕುಳಿತು ನಿರ್ಲಜ್ಜರಾಗಿ, `ಪ್ಲೀಸ್ ನನಗೊಂದಿಷ್ಟು ಪ್ರೀತಿ ಕೊಡು’ ಎಂದು ಅಂಗಲಾಚುವುದಿದೆಯಲ್ಲ? ಅದು ಅತ್ಯಂತ ಯಾತನಾದಾಯಕ ಕೆಲಸ.

ಆದರೂ ಪರವಾಗಿಲ್ಲ, ಅವಳೆದುರು ಭಿಕ್ಷಾಪಾತ್ರೆಯಿರಿಸಿ ಕೈಕಟ್ಟಿಕೊಂಡು ನಿಂತು ಬಿಡುತ್ತೇವೆ. ಎದೆಯಲ್ಲಿ ಮರಕುಟುಕನ ಹಕ್ಕಿಯಂತೆ ಕುಕ್ಕುತ್ತಿದ್ದರೆ ಅವಳ ಸಮ್ಮುಖದಲ್ಲಿ ದೀನರಾಗಿ ನಿಂತು ಉಗುಳುಗುಳು ನುಂಗುತ್ತೇವೆ. ಈಗಾಗಲೇ ಅವಳಿಗೆ ‘I love you’  ಅಂತ ಹೇಳಿಬಿಟ್ಟಿದ್ದೇವಾದ್ದರಿಂದ, ಅದನ್ನು ಪಡೆಯಲು ಏನನ್ನಾದರೂ ಮಾಡಲು ಸಿದ್ಧರಾಗುತ್ತೇವೆ.

-ರವಿ ಬೆಳಗೆರೆ

One thought on “ಅವಳನ್ನು ಒಲಿಸಿಕೊಳ್ಳುವುದು ಹೇಗೆ? : ಒಂದು ಬೊಗಸೆ ಪ್ರೀತಿ

Leave a Reply

Your email address will not be published. Required fields are marked *