ಹಾಯ್ ಬೆಂಗಳೂರ್

ಮೊದಲ ನೋಟದ ಪ್ರೇಮವೆಂಬುದು ನಿಜವೇ?

  • ಅವಳನ್ನು ಒಲಿಸಿಕೊಳ್ಳುವುದು ಹೇಗೆ?: ಅಧ್ಯಾಯ-20

ಮೊದಲ ನೋಟದ ಪ್ರೇಮವೆಂಬುದು ನಿಜವೇ?

Love at first sight!

ಮೊದಲ ನೋಟದಲ್ಲೇ ಪ್ರೇಮ-ಅಂತಾರಲ್ಲ, ಅದು ನಿಜವಾ? ಎಂಬ ಪ್ರಶ್ನೆಯನ್ನು ಅನೇಕ ಸಲ ನನಗೆ ನಾನೇ ಕೇಳಿಕೊಂಡಿದ್ದೇನೆ. ನನ್ನ ಮೊದಲ ಪ್ರೇಮದ ವಿಷಯದಲ್ಲಾದದ್ದು ಅದೇನಾ? ಅಂತಲೂ ಕೇಳಿಕೊಂಡಿದ್ದೇನೆ. ಇವತ್ತಿಗೂ clear ಆಗುತ್ತಿಲ್ಲ. ಕೆಲವು ವ್ಯಕ್ತಿತ್ವಗಳೇ ಹಾಗಿರುತ್ತವೆ. ಮಿಂಚಿನ ಥರಾ ಹೊಳೆದು ಕಣ್ಸೆಳೆಯುತ್ತವೆ. ಮಳೆಯಂತೆ ಮೈ ಮುತ್ತಿಕೊಳ್ಳುತ್ತವೆ. ಅಂಥ ವ್ಯಕ್ತಿಗಳು ಮೊದಲ ನೋಟಕ್ಕೆ ಮನಸ್ಸು ಹಿಡಿದು ಹಾಕಿಬಿಡುತ್ತಾರೆ. ನಮಗೇ ಅರಿವಿಲ್ಲದೆ ಅವರ ವ್ಯಕ್ತಿತ್ವದ ಪ್ರಭಾವ ವಲಯಕ್ಕೆ ಸಿಕ್ಕಿಕೊಂಡುಬಿಡುತ್ತೇವೆ.

ನಿಗಿನಿಗಿಸುವ ತಾರುಣ್ಯದಲ್ಲಿ ಹುಡುಗ-ಹುಡುಗಿಯರಿಗಾಗುವುದೂ ಇದೇನಾ? ಇದನ್ನು `ಪ್ರೇಮ’ವೆಂದು ಪರಿಗಣಿಸಬಹುದೇ?

ಅನೇಕ ಪ್ರಸಂಗಗಳಲ್ಲಿ ಮೊದಲ ನೋಟವೇ powerful ಆಗಿ ಕೆಲಸ ಮಾಡಿರುತ್ತದೆ. ರೂಪು-ನಿಲುವು-ಉಡುಗೆ-ವರ್ತನೆ ಇತ್ಯಾದಿಗಳು ತಕ್ಷಣ ನಮ್ಮನ್ನು ಇಂಪ್ರೆಸ್ ಮಾಡಿ ಬಿಡುತ್ತವೆ. ಅಲ್ಲಿಂದ ಆಕಸ್ಮಿಕವೆಂಬಂತೆ ಶುರುವಾಗುವ ಪ್ರೇಮವು ಸಾಯುವ ತನಕ ಬೆನ್ನತ್ತಿ ಬರುವುದೂ ಉಂಟು.

ಆದರೆ ಮೊದಲ ನೋಟದ ಆಕರ್ಷಣೆ ಅನೇಕ ಸಲ ಅಪ್ಪಟ ಪ್ರೀತಿಯಾಗಿರದೆ, ಆ ಹದಿ ವಯಸ್ಸಿನ infatuation ಅಷ್ಟೇ ಆಗಿ ಬಿಟ್ಟಿರುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರವಿರಲಿ. ಹುಡುಗಿ ಕಣ್ಸೆಳೆದ ಮಾತ್ರಕ್ಕೇ, ಅವಳ ರೂಪು ಮೆಚ್ಚುಗೆಯಾದ ಮಾತ್ರಕ್ಕೇ…. ಅದನ್ನು ಪ್ರೇಮವೆಂದು `ಎಲ್ಲ ಪ್ರಸಂಗಗಳಲ್ಲೂ’ ಭ್ರಮಿಸಿ ತೀರ್ಮಾನಕ್ಕೆ ಬರಕೂಡದು. ಪ್ರೀತಿ ನಿಜವಾದದ್ದೇ ಆದರೆ, ಅದರ ಪ್ರತಿ ನೋಟವೂ ಮೊದಲ ನೋಟದಷ್ಟೇ powerful ಆಗಿರುತ್ತದೆ.

ನಿಮ್ಮ ಅನುಭವ ಏನನ್ನುತ್ತದೆ?

                -ರವಿ ಬೆಳಗೆರೆ

Leave a Reply

Your email address will not be published. Required fields are marked *