ಹಾಯ್ ಬೆಂಗಳೂರ್

ಮಾಡರ್ನ್ ಸರ್ಕಸ್‌ನ ಜನಕ

ಮಾಡರ್ನ್ ಸರ್ಕಸ್‌ನ ಜನಕ

ಕೇವಲ ಮಕ್ಕಳನ್ನಲ್ಲದೇ ಹಿರಿಯರನ್ನೂ ರಂಜಿಸುವ ಮಾಡರ್ನ್ ಸರ್ಕಸ್ ಅನ್ನು ಮೊದಲಿಗೆ ಹುಟ್ಟು ಹಾಕಿದ ಸಾಹಸಿ ಇಂಗ್ಲಂಡ್‌ನ ಫಿಲಿಪ್ ಆಸ್ಟ್‌ಲೇ.

Philip Astley

ತೀರಾ ಚಿಕ್ಕ ವಯಸ್ಸಿಗೇ ಕುದುರೆ ಸವಾರಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಈತ ಅದರಲ್ಲಿ ಪರಿಣಿತನಾದ ಕಾರಣಕ್ಕೆ ಅಶ್ವದಳದ ಸೈನಿಕನಾಗಿಯೂ ಕೆಲಸ ಮಾಡಿದ. ನಂತರ ಲಂಡನ್‌ನಲ್ಲಿ ಕುದುರೆ ಸವಾರಿಯ ತರಬೇತಿ ಶಾಲೆ ತೆರೆಯಲು ನಿರ್ಧರಿಸಿ ಅದಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ವೃತ್ತಾಕಾರದ ಮೈದಾನದಲ್ಲಿ ತನ್ನ ಕುದುರೆ ಸವಾರಿಯ ವಿಭಿನ್ನ ಶೈಲಿಗಳ ಚಾಕಚಕ್ಯತೆ ಪ್ರದರ್ಶಿಸಿದ. ತರಬೇತಿ ಶಾಲೆಯಿಂದ ಬಂದ ಹಣದಿಂದ ಶ್ರೀಮಂತನಾದ ಫಿಲಿಪ್‌ಗೆ ಹೊಸ ಆಲೋಚನೆಯೊಂದು ಹೊಳೆಯಿತು. ಜನರನ್ನು ರಂಜಿಸಲು ದೇಶದ ವಿವಿಧೆಡೆ ಪ್ರತ್ಯೇಕವಾಗಿ ಪ್ರದರ್ಶನ ನೀಡುತ್ತಿದ್ದ ಗಾರುಡಿಗರು, ಮ್ಯಾಜಿಕ್ ಮಾಡುವವರು, ತಂತಿಯ ಮೇಲೆ ನಡೆಯುವ ಪ್ರದರ್ಶನ ನೀಡಿ ಹೊಟ್ಟೆ ಹೊರೆಯುತ್ತಿದ್ದ ದೊಂಬರು, ಹಾಸ್ಯಗಾರರು, ನಾಯಿ, ಕೋತಿ, ಹಕ್ಕಿ ಮುಂತಾದವುಗಳಿಗೆ ತರಬೇತಿ ನೀಡಿ ರಂಜಿಸುತ್ತಿದ್ದವರು ಇವರನ್ನೆಲ್ಲ ಒಂದೆಡೆ ಸೇರಿಸಿ ೧೭೬೮ರಲ್ಲಿ ` Astley’s Amphi Theater’ ಎಂಬ ಹೆಸರಿನ ಸಂಸ್ಥೆ ಕಟ್ಟಿ ಪ್ರದರ್ಶನ ನೋಡಲು ಬರುವವರಿಗೆ ಟಿಕೀಟು ಶುಲ್ಕ ವಿಧಿಸಿದ. ಇದೇ ವಿಶ್ವದ ಮೊಟ್ಟ ಮೊದಲ ಮಾಡರ್ನ್ ಸರ್ಕಸ್.

Leave a Reply

Your email address will not be published. Required fields are marked *