ಆಸ್ಪತ್ರೆಗಳಾಗಿ ರೂಪುಗೊಳ್ಳಲಿವೆಯಾ ಹೊಟೇಲುಗಳು?

in ಜಿಲ್ಲಾ ಸುದ್ದಿಗಳು

ಇನ್ನು ಮುಂದೆ ದೊಡ್ಡ ದೊಡ್ಡ ಲಾಡ್ಜ್ ಗಳು, ಹೊಟೇಲುಗಳು ಆಸ್ಪತ್ರೆಗಳಾಗಿ ರೂಪುಗೊಳ್ಳಲಿವೆಯಾ? ಹೌದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಒಂದು ನಿರ್ಧಾರಕ್ಕೆ ಬಂದಂತಿದೆ. ಈಗಾಗಲೇ ಕೋವಿಡ್ ಮಹಾಮಾರಿ ಬೆಂಗಳೂರಿನಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸದ್ಯ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ, ವಿಕ್ಟೋರಿಯಾ, ಬೌರಿಂಗ್ ನಂತಹ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ನಾನ್ ಕೋವಿಡ್ ಅಂದರೆ ಬೇರೆ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಅವರಿಗೂ ಸೋಂಕು ಹಬ್ಬುವ ಸಾಧ್ಯತೆಗಳು ಇವೆ. ಹೀಗಾಗಿ ನಾನ್ ಕೋವಿಡ್ ಪೇಷೆಂಟುಗಳನ್ನು ಹೊಟೇಲ್ ಗಳಿಗೆ ಶಿಫ್ಟ್ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಹೊಟೇಲ್ ಗಳನ್ನು ಬಾಡಿಗೆಗೆ ಪಡೆದು ಅಲ್ಲಿ ನಾನ್ ಕೋವಿಡ್ ಪೇಷೆಂಟುಗಳಿಗೆ ಚಿಕಿತ್ಸೆ ಮುಂದುವರೆಸುವುದಕ್ಕೆ ಖಾಸಗಿ ಆಸ್ಪತ್ರೆಗಳು ಕೂಡ ಒಪ್ಪಿಕೊಂಡಿವೆ. ಎರಡೂವರೆ ಸಾವಿರ ಹಾಸಿಗೆಗಳನ್ನು ನೀಡಲಿದ್ದು, ಜುಲೈ ತಿಂಗಳ ಮೊದಲ ವಾರದಲ್ಲಿ ಒಂದೂವರೆ ಸಾವಿರ ಬೆಡ್ ಗಳನ್ನು ಒದಗಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಉಳಿದ ಒಂದು ಸಾವಿರ ಹಾಸಿಗೆಗಳನ್ನು ನೀಡುವುದಾಗಿ ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ಸರ್ಕಾರದ ಈ ನಿರ್ಧಾರ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಇನ್ನು ಕೋವಿಡ್ ಚಿಕಿತ್ಸಾ ವೆಚ್ಚದ ಕುರಿತು ಖಾಸಗಿ ಆಸ್ಪತ್ರೆಗಳು ಸರ್ಕಾರ ವಿಧಿಸಿದ ದರವನ್ನೇ ತೆಗೆದುಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಅದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆಯಾ ಎಂಬುದು ಪ್ರಶ್ನೆಯಾಗೇ ಉಳಿದುಕೊಂಡಿದೆ. ಈ ಮಧ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ ಎಂಬ ಆಪಾದನೆಯೂ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಸರ್ಕಾರ ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿರುವುದಂತೂ ಸತ್ಯ. ಜನರು ಎಷ್ಟು ಸುರಕ್ಷಿತವಾಗಿದ್ದರೂ ಸಾಲದು.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top