ಹಾಯ್ ಬೆಂಗಳೂರ್

ಅಪ್ಪು ಅಭಿಮಾನಿಗಳು ಏಪ್ರಿಲ್ 1ನೇ ತಾರೀಖಿಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ

2021ರಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿ ರಿಲೀಸ್ ಆಗುತ್ತಿರುವ ಕನ್ನಡ ಸಿನೆಮಾಗಳಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಕೂಡ ಒಂದು. ನಿರ್ದೇಶಕ ಸಂತೋಷ್ ಆನಂದರಾಮ್ ಗೆ ಬಹುಶಃ ಈ ಪ್ರಾಜೆಕ್ಟ್ ಇಷ್ಟೊಂದು ಗ್ಯಾಪ್ ತೆಗೆದುಕೊಳ್ಳುತ್ತದೆ ಅಂತ ನಿಜಕ್ಕೂ ಗೊತ್ತಿರಲಿಲ್ಲ ಅನಿಸುತ್ತದೆ. ಹಾಗಾಗಿ ಆರಂಭದಲ್ಲಿ ಕೊಂಚ ಲೇಟ್ ಮಾಡಿದರು. ಗೊತ್ತಿದ್ದಿದ್ದರೆ ಎರಡು ಸಿನೆಮಾ ಮಾಡಿಬಿಡುತ್ತಿದ್ದರೇನೋ? ಅಷ್ಟೊಂದು ಚುರುಕು ಮತ್ತು ಸ್ಮಾರ್ಟ್ ನಿರ್ದೇಶಕ ಆತ.

ಸ್ಮಾರ್ಟ್ ಅಂದರೆ ನೋಡೋಕೆ ಸ್ಮಾರ್ಟ್ ಅಂತಲ್ಲ. ಬುದ್ಧಿವಂತಿಕೆಯಲ್ಲಿ ಸ್ಮಾರ್ಟ್. ಒಬ್ಬ ನಿರ್ದೇಶಕನಿಗಿರಬೇಕಾದ ನಿಜವಾದ ವಿಷನ್, ಕಮಿಟ್ ಮೆಂಟ್ ಸಂತೋಷ್ ಗಿದೆ. ಇಲ್ಲದಿದ್ದರೆ ಅವರು ಮೊದಲ ಚಿತ್ರ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸಿಲ್ವರ್ ಜ್ಯೂಬಿಲಿ ಬಾರಿಸುತ್ತಿರಲಿಲ್ಲ. ಎರಡನೇ ಚಿತ್ರ ‘ರಾಜಕುಮಾರ’ ಸೆಂಚುರಿ ಹೊಡೆಯುತ್ತಿರಲಿಲ್ಲ. ಜನರ ನಾಡಿಮಿಡಿತವನ್ನು ಯಾವ ರೀತಿ ಹಿಡಿದಿಟ್ಟುಕೊಳ್ಳಬೇಕು ಅನ್ನೋದು ಸಂತೋಷ್ ಗೆ ಚೆನ್ನಾಗಿ ಗೊತ್ತಿದೆ. ಒಂದೇ ಒಂದು ಕ್ಷಣ ಕೂಡ ಸ್ಕ್ರೀನ್ ನಿಂದ ಕಣ್ಣನ್ನು ಆಚೆ ತೆಗೆಯದಂತೆ ಮಾಡಿಬಿಡುತ್ತಾರೆ.

ಹಾಂ… ಇಲ್ಲೀ ತನಕ ‘ಯುವರತ್ನ’ ಚಿತ್ರದ ಒಂದು ಡೈಲಾಗ್ ಹಾಗೂ ಎರಡು ಹಾಡುಗಳ ತುಣುಕಿರುವ ಟೀಸರ್ರನ್ನು ಬಿಡುಗಡೆ ಮಾಡಲಾಗಿದ್ದು ಅದಕ್ಕೆ ಅಭಿಮಾನಿಗಳಿಂದ ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ. ಇನ್ನೇನು ಸದ್ಯದಲ್ಲೇ ಇನ್ನೊಂದು ಹಾಡಿನ ತುಣುಕನ್ನು ನಿರ್ದೇಶಕ ಸಂತೋಷ್ ಬಿಡುಗಡೆ ಮಾಡಲಿದ್ದಾರೆ.

ಅಷ್ಟರಲ್ಲಿ ಏಪ್ರಿಲ್ 1ನೇ ತಾರೀಖು ಬಂದೇ ಬಿಡುತ್ತದೆ. ಅವತ್ತು ಚಿತ್ರಮಂದಿರದ ಮುಂದೆ ಪುನೀತ್ ಅಭಿಮಾನಿಗಳು ಅಕ್ಷರಶಃ ಹಬ್ಬವನ್ನೇ ಆಚರಿಸಿಬಿಡುತ್ತಾರೆ. ಯಾಕೆಂದರೆ ಅವತ್ತೇ ‘ಯುವರತ್ನ’ ರಿಲೀಸ್.

Leave a Reply

Your email address will not be published. Required fields are marked *