Daily archive

September 16, 2020

ಸಂಜನಾಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ

in ಜಿಲ್ಲಾ ಸುದ್ದಿಗಳು/ಸಿನೆಮಾ ಪುಟ
  • ರಾಗಿಣಿ ನಂತರ ನಟಿ ಸಂಜನಾಗೂ ಪರಪ್ಪನ ಅಗ್ರಹಾರದ ವಾಸ ಫಿಕ್ಸ್ ಆಗಿದೆ. ಸಿಸಿಬಿ ಕಸ್ಟಡಿಯಲ್ಲಿ ಇಷ್ಟು ದಿನ ಇದ್ದ ಸಂಜನಾಗೆ ಒಂದನೇ ಎಸಿಎಂಎಂ ನ್ಯಾಯಾಲಯ ಇದೇ ತಿಂಗಳ 29ನೇ ತಾರೀಖಿನ ತನಕ  ನ್ಯಾಯಾಂಗ ಬಂಧನ ವಿಧಿಸಿದೆ.
  • ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಅಂಜುಮಾಲಾ ನಾಯಕ್ ಅವರು ಈಕೆಯನ್ನುಮಹಿಳಾ ಸಾಂತ್ವನ ಕೇಂದ್ರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿದರು.
  • ವಿಚಾರಣೆ ನಡೆಸಿದ ನ್ಯಾಯಾಧೀಶರು ಹದಿನಾಲ್ಕುದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಸಂಜನಾ ಜೊತೆಗೆ ವಿರೇನ್ ಖನ್ನಾ ಮತ್ತು ರವಿಶಂಕರ್ ಗೂ ಹದಿನಾಲ್ಕು ದಿನಗಳ ಜೈಲೂಟ ಫಿಕ್ಸ್ ಆಗಿದೆ.
  • ಆದೇಶಕ್ಕೂ ಮುನ್ನ ಸಾಕಷ್ಟು ಹೊತ್ತು ವಾದ ಪ್ರತಿವಾದ ನಡೆಯಿತು. ಜಡ್ಜ್ ಮುಂದೆ ಸಂಜನಾ ವಕೀಲರು ತಾಂತ್ರಿಕ ಪ್ರಶ್ನೆ ಕೇಳಿದರು. ಎನ್.ಡಿ.ಪಿ. ಎಸ್ ಕಾಯ್ದೆಯ ಯಾವ ಸೆಕ್ಷನ್ ಅಡಿ ಸಂಜನಾರ ಮೇಲೆ ಕೇಸ್ ಹಾಕಲಾಗಿದೆ. ಎನ್.ಡಿ.ಪಿ.ಎಸ್ ನ್ಯಾಯಾಲಯದ ಮುಂದೆ ಸಂಜನಾರನ್ನು ಸಿಸಿಬಿ ಪೊಲೀಸರು ಹಾಜರುಪಡಿಸಬೇಕಿತ್ತು. ಆದರೆ ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇಕೆ ಎಂದು ಸಂಜನಾ ಪರ ವಕೀಲರು ವಾದ ಮಂಡಿಸಿದರು.
  • ಇದುವರೆಗೂ ನಾವು ಮೂರು ಅರ್ಜಿಗಳನ್ನು ಸಲ್ಲಿಸಿದ್ದೇವೆ. ಯಾವುದಕ್ಕೂ ಸರಿಯಾದ ಮಾಹಿತಿಯನ್ನು ಸಿಸಿಬಿ ನೀಡಿಲ್ಲ. ಯಾವ ಸೆಕ್ಷನ್ ಹಾಕಿದ್ದಾರೆ ಎಂಬುದು ಕೂಡ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಸಂಜನಾಗೆ ಜಾಮೀನು ನೀಡಬೇಕು ಎಂದು ಸಂಜನಾರ ಪರ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡರು.
  • ಇದಕ್ಕೆ ಪ್ರತಿಯಾಗಿ ಸರ್ಕಾರಿ ಪರ ವಕೀಲರು ನಾವು ಈ ಕೇಸನ್ನು ಎನ್.ಡಿ.ಪಿ.ಎಸ್ ಗೆ ವರ್ಗಾಯಿಸುತ್ತೇವೆ. ಅಲ್ಲಿ ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಎಂದು ಕೋರಿಕೊಂಡರು.
  • ಇದೀಗ ಸಿಸಿಬಿ ಪರ ವಕೀಲರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಸಂಜನಾರನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸುವಂತೆ ಆದೇಶಿಸಿದೆ.

1 2 3 5
Go to Top