Daily archive

September 10, 2020

ಕಿರಿಕ್ ಸಂಜನಾಗೆ ಚಿಕನ್ ಚಾಪ್ಸ್ ಮಟನ್ ಬಿರಿಯಾನಿ

in ಲೀಡ್ ನ್ಯೂಸ್/ಸಿನೆಮಾ ಪುಟ
  • ಡೋಪ್ ಟೆಸ್ಟ್ ಗೆ ಒಪ್ಪಲ್ಲ, ಅದನ್ನು ತಿರಸ್ಕರಿಸೋದು ನನ್ನ ಮೂಲಭೂತ ಹಕ್ಕು ಅಂತ ಪೊಲೀಸರ ಮುಂದೆ ಕ್ಯಾತೆ ತೆಗೆದು ರಂಪಾಟ ಮಾಡುತ್ತಿದ್ದ ಸಂಜನಾಗೆ ಪೊಲೀಸರು ಕೋರ್ಟ್ ಆರ್ಡರ್ ತೋರಿಸುತ್ತಿದ್ದಂತೆ ತೆಪ್ಪಗಾಗಿದ್ದಾಳೆ. ನ್ಯಾಯಾಲಯದ ಆದೇಶ ಪಡೆದುಕೊಂಡೇ ನಾವು ನಿಮಗೆ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ನೀವು ಒಪ್ಪಲಿಲ್ಲ ಅಂದರೆ ನ್ಯಾಯಾಂಗ ನಿಂದನೆ ಮಾಡಿದಂತಾಗುತ್ತದೆ ಅಂತ ಪೊಲೀಸರು ಎಚ್ಚರಿಕೆ ನೀಡಿದ ಮೇಲೆ ಡೋಪ್ ಟೆಸ್ಟ್ ಗೆ ಸಂಜನಾ ಸಹಕರಿಸಿದ್ದಾಳೆ.
  • ನಂತರ ಊಟದ ವಿಚಾರಕ್ಕೆ ಕ್ಯಾತೆ ತೆಗೆದ ಆಕೆ ಸಾಂತ್ವನ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟ ಸ್ವಲ್ಪವೂ ಚೆನ್ನಾಗಿಲ್ಲ. ನಾನು ದಿನಕ್ಕೆ ಎರಡು ಬಾರಿ ನಾನ್ ವೆಜ್ ತಿಂತೀನಿ. ಕಳೆದ ಎರಡು ದಿನಗಳಿಂದ ನಾನ್ ವೆಜ್ ತಿಂದೇ ಇಲ್ಲ ಅಂತ ಹಠ ಮಾಡಿದ್ದಾಳೆ. ಆಕೆಯ ಕಾಟ ತಡೀಲಾರದೆ ಪೊಲೀಸರು ರೋಟಿ ಮತ್ತು ಚಿಕನ್ ಚಾಪ್ಸ್, ಮಟನ್ ಬಿರಿಯಾನಿ ತರಿಸಿಕೊಟ್ಟಿದ್ದಾರೆ.
  • ಪಾಪ ಒಬ್ಬರಿಗೆ ತರಿಸಿ ಇನ್ನೊಬ್ಬರಿಗೆ ತರಿಸದಿದ್ದರೆ ಹೇಗೆ? ನಿಮಗೂ ಬೇಕಾ ಅಂತ ರಾಗಿಣಿಗೆ ಕೇಳಿದ್ದಾರೆ. ಅದಕ್ಕೆ ಆಕೆ ಆಶ್ಚರ್ಯ ಎನಿಸುವಂತೆ ಗುರುವಾರ ಉಪವಾಸ ಮಾಡ್ತೀನಿ ಅಂತ ಹೇಳಿದ್ದಾಳೆ.
  • ಈ ಮಧ್ಯೆ ಇನ್ನೊಂದು ಡ್ರಾಮಾ ಶುರುವಾಗಿದೆ. ನಾನು ಸಂಜನಾಳನ್ನ ಮದುವೆಯಾಗಿದೀನಿ ಅಂತ ಅಜೀಜ್ ಎಂಬಾತ ಹೇಳಿಕೊಂಡಿದ್ದಾನೆ. ಆದರೆ ಸಂಜನಾಳ ತಾಯಿ ಅದನ್ನು ಅಲ್ಲಗಳೆದಿದ್ದಾರೆ.

Go to Top