Daily archive

September 09, 2020

“ನಿಮ್ಮ ದೇಹ ಅಪ್ಪ ಅಮ್ಮ ಕೊಟ್ಟ ಭಿಕ್ಷೆ ಅದನ್ನು ಚೆನ್ನಾಗಿ ನೋಡಿಕೊಳ್ಳಿ” – ಯಶ್

in ಲೀಡ್ ನ್ಯೂಸ್/ಸಿನೆಮಾ ಪುಟ
  • “ನೀವು ಇವತ್ತು ಇರೋದು ನಿಮ್ಮ ಅಪ್ಪ ಅಮ್ಮನಿಂದಾಗಿ. ನಿಮ್ಮ ದೇಹವು ಅವರು ಕೊಟ್ಟ ಭಿಕ್ಷೆ. ಅದನ್ನು ಕಡೇ ತನಕ ಚೆನ್ನಾಗಿ ಕಾಪಾಡಿಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ. ಡ್ರಗ್ಸು ಅದೂ ಇದು ಅಂತ ತೆಗೆದುಕೊಂಡು ನಿಮ್ಮ ಅತ್ಯಮೂಲ್ಯವಾದ ದೇಹವನ್ನು ಹಾಳು ಮಾಡಿಕೊಳ್ಳುವುದಕ್ಕೆ ನಿಮಗೆ ಯಾವುದೇ ಅಧಿಕಾರ ಇಲ್ಲ. ಇಂತಹ ದರಿದ್ರವನ್ನೆಲ್ಲ ತೆಗೆದುಕೊಳ್ಳುವುದು ಬಿಟ್ಟು ಚೆನ್ನಾಗಿ ಬಾಳಿ ಬದುಕಿ” – ಇಂತಹ ಜನ ಮೆಚ್ಚುವ ಮಾತನ್ನು ಹೇಳಿರೋದು ಬೇರೆ ಯಾರೂ ಅಲ್ಲ…. ನಟ ರಾಕಿಂಗ್ ಸ್ಟಾರ್ ಯಶ್.
    ಇದು ಕನ್ನಡ ಚಿತ್ರರಂಗಕ್ಕೆ ಮಾತ್ರ ಅಂಟಿದ ಸಮಸ್ಯೆ ಅಲ್ಲ. ಇಡೀ ದೇಶಕ್ಕೇ… ಇಡೀ ಜಗತ್ತಿಗೇ ಅಂಟಿಕೊಂಡಿರುವ ದೊಡ್ಡ ಪಿಡುಗು. ನಾವು, ನೀವು ಎಲ್ಲರೂ ಸೇರಿ ಇದರ ವಿರುದ್ಧ ಹೋರಾಟ ಮಾಡಬೇಕು. ಕೇವಲ ನಟ-ನಟಿಯರು ಅಂತಲೇ ಅಲ್ಲ ಒಬ್ಬ ಚಿಕ್ಕ ಹುಡುಗ, ಕಾಲೇಜ್ ಯುವಕ ಇದನ್ನು ತೆಗೆದುಕೊಂಡರೂ ಕೂಡ ಇದೇ ರೀತಿ ವಿರೋಧಿಸಬೇಕು. ಈ ಡ್ರಗ್ಸ್ ಎಂಬುದನ್ನು ಬುಡ ಸಮೇತ ಕಿತ್ತು ಹಾಕಬೇಕು. ನನಗೂ ಈಗ ಮಕ್ಕಳಾಗಿವೆ. ಅಪ್ಪ ಅಮ್ಮ ಯಾವ ರೀತಿ ಪ್ರೀತಿ ತೋರಿಸುತ್ತಾರೆ, ತಮಗೆ ಇದ್ಯೋ ಇಲ್ಲವೋ ಅನ್ನೋದನ್ನೂ ಲೆಕ್ಕಿಸದೆ ನಿಮಗೆ ಊಟ ಹಾಕಿ ಬೆಳೆಸಿರುತ್ತಾರೆ. ಡ್ರಗ್ಸ್ ತೆಗೆದುಕೊಳ್ಳುವ ಯುವ ಪೀಳಿಗೆ ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಯಶ್ ಹೇಳಿದ್ದಾರೆ.

1 2 3 5
Go to Top