Daily archive

September 08, 2020

ಕಡೆಗೂ ನಟಿ ರಿಯಾ ಚಕ್ರವರ್ತಿ ಅರೆಸ್ಟ್

in ಲೀಡ್ ನ್ಯೂಸ್/ಸಿನೆಮಾ ಪುಟ
  • ಸುಶಾಂತ್ ಸಿಂಗ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನಂಟಿನ ಕೋನದಿಂದ ತನಿಖೆ ನಡೆಸುತ್ತಿದ್ದ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದಾರೆ.
  • ಇತ್ತೀಚೆಗಷ್ಟೇ ರಿಯಾಳ ಸಹೋದರ ಶೌವಿಕ್ ಚಕ್ರವರ್ತಿಯನ್ನು ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದರು. ಜೊತೆಗೆ ವಿಲೇನ್ ಖನ್ನಾ, ವಿಲಾಂತ್ರಾ ಸೇರಿದಂತೆ ಆರು ಮಂದಿಯನ್ನು ಕೂಡ ಅರೆಸ್ಟ್ ಮಾಡಲಾಗಿತ್ತು. ಈಕೆ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಾಳೆ ಮತ್ತು ಮಾರುತ್ತಾಳೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎನ್ ಸಿ ಬಿ ಅಧಿಕಾರಿಗಳು ಆಕೆಯನ್ನು ವಿಚಾರಣೆ ನಡೆಸುತ್ತಿದ್ದರು.
  • ಇಷ್ಟು ದಿನ ರಿಯಾಳನ್ನು ತನಿಖೆ ಮಾಡಿದಾಗ ಸಾಕಷ್ಟು ವಿಚಾರಗಳನ್ನು ಆಕೆ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮುಂಬೈ ಮತ್ತು ಪುಣೆಯ ಒಂದಷ್ಟು ಡ್ರಗ್ ಪೆಡ್ಲರ್ ಗಳು ಅರೆಸ್ಟ್ ಆಗಿದ್ದರು. ಅವರ ಹೆಸರುಗಳು ಈಕೆಯ ವಿಚಾರಣೆ ವೇಳೆ ಕೇಳಿ ಬಂದಿದೆ.
  • ನಾಳೆ ರಿಯಾಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲಿರುವ ಎನ್ ಸಿ ಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುತ್ತಾರಾ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Go to Top