Daily archive

September 07, 2020

ಜಿಡಿಪಿ ಕುಸಿತವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಘಂಟೆ: ರಘುರಾಮ್ ರಾಜನ್

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ದೇಶದ ಪ್ರಸಕ್ತ ಸಾಲಿನ (ಏಪ್ರಿಲ್ – ಜೂನ್ 2020) ಜಿಡಿಪಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಇದು ಎಚ್ಚರಿಕೆಯ ಘಂಟೆಯಾಗಿದೆ. ಈಗ ಎಚ್ಚೆತ್ತುಕೊಳ್ಳಲೇಬೇಕಿದೆ ಎಂದಿದ್ದಾರೆ.
  • ಪ್ರಸಕ್ತ ಪರಿಸ್ಥಿತಿಯಲ್ಲಿ ಸರ್ಕಾರವು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಅದು ಅಳವಡಿಸಿಕೊಂಡಿರುವ ತಂತ್ರವು ಆರ್ಥಿಕತೆಯ ದೃಷ್ಟಿಯಿಂದ ಸಮಂಜಸವಲ್ಲ ಎಂದು ರಘುರಾಮ್ ರಾಜನ್ ಪ್ರತಿಕ್ರಿಯಿಸಿದ್ದಾರೆ. ಕೋವಿಡ್ ಕಾರಣ ಕೊಡಬೇಡಿ. ಅಮೆರಿಕಾ ಮತ್ತು ಇಟಲಿಯಲ್ಲಿ (ಏಪ್ರಿಲ್ ನಿಂದ ಜೂನ್ ತನಕ) ಹೆಚ್ಚು ಸೋಂಕಿತರಿದ್ದರೂ ಆ ದೇಶದಲ್ಲೇ ಜಿಡಿಪಿ ಇಷ್ಟೊಂದು ಕುಸಿತ ಕಂಡಿಲ್ಲ.
  • ಇಟಲಿಯಲ್ಲಿ ಶೇ.12.4 ಮತ್ತು ಅಮೆರಿಕಾದಲ್ಲಿ ಶೇ. 9.5ರಷ್ಟು ಕುಸಿತ ಕಂಡಿದೆ. ಆದರೆ ನಮ್ಮ ದೇಶದಲ್ಲಿ -23.9 (ಮೈನಸ್ 23.9) ಕ್ಕೆ ಕುಸಿದಿದೆ. ಕಳೆದ ನಲವತ್ತು ವರ್ಷಗಳಲ್ಲಿ ಇಂತಹ ದುಸ್ಥಿತಿಯನ್ನು ದೇಶ ಕಂಡಿರಲಿಲ್ಲ ಎಂದು ರಘುರಾಮ್ ರಾಜನ್ ಟೀಕಿಸಿದ್ದಾರೆ.
  • ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ನಮ್ಮ ದೇಶದಲ್ಲಿ ಇನ್ನಷ್ಟು ಹೆಚ್ಚಲಿದೆ. ಆಗ ಜಿಡಿಪಿ ಇನ್ನಷ್ಟು ಕುಸಿತ ಕಾಣಲಿದೆಯಾ ಅಂತ ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.
  • ಕೇಂದ್ರ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೋ ಕಾದು ನೋಡಬೇಕಿದೆ.

Go to Top