Daily archive

September 05, 2020

ನಟಿ ರಿಯಾ ಚಕ್ರವರ್ತಿ ಬಂಧನ ಸಾಧ್ಯತೆ

in ಲೀಡ್ ನ್ಯೂಸ್/ಸಿನೆಮಾ ಪುಟ
  • ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋವಿನ ವರದಿ ಪ್ರಕಾರ ನಟಿ ರಿಯಾ ಚಕ್ರವರ್ತಿಗೂ ಡ್ರಗ್ಸ್ ಗೂ ಸಂಬಂಧವಿದೆ. ಆಕೆಯ ವಾಟ್ಸಾಪ್ ಚ್ಯಾಟ್ ನ ಎನ್.ಸಿ.ಬಿ. ಅಧಿಕಾರಿಗಳು ವಿವರವಾಗಿ ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಗೊತ್ತಾಗಿರುವುದೇನೆಂದರೆ ಆಕೆ ಡ್ರಗ್ಸ್ ನ್ನು ಕೇವಲ ಖರೀದಿ ಮಾಡಿಲ್ಲ. ಮಾರಿಯೂ ಇದ್ದಾಳೆ.
  • ನಿನ್ನೆ ರಿಯಾ ಮನೆ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ರೇಡ್ ಮಾಡಿದರು.ರಿಯಾಳ ಸಹೋದರ ಶೌವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ನ ಮ್ಯಾನೇಜರ್ ಸ್ಯಾಮುಯಲ್ ಮಿರಾಂಡಾನನ್ನು ಸುದೀರ್ಘ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಂತರ ಶುಕ್ರವಾರ ರಾತ್ರಿ (ಸೆ.4) ಅವರನ್ನು ಬಂಧಿಸಲಾಗಿತ್ತು.
  • ಮೂಲಗಳ ಪ್ರಕಾರ ನಾಳೆ ಭಾನುವಾರ (ಸೆ.6ರಂದು) ರಿಯಾಳನ್ನು ವಿಚಾರಣೆಗೆ ಕರೆಸಲಾಗುತ್ತದೆ ಮತ್ತು ಬಂಧಿಸಲಾಗುತ್ತದೆ.
  • ಒಟ್ಟಿನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ – ಈ ಮೂರು ತನಿಖಾ ಸಂಸ್ಥೆಗಳು ಒಟ್ಟಿಗೆ ವಿಚಾರಣೆ ನಡೆಸುತ್ತಿವೆ. ಸುಶಾಂತ್ ಕೊಲೆಯಾಗಿದ್ದಾನಾ ಎಂಬ ದೃಷ್ಟಿಕೋನದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ, ಮನಿಲಾಂಡರಿಂಗ್ ನಡೆದಿದ್ಯಾ ಅಂತ ಇ.ಡಿ. ಅಧಿಕಾರಿಗಳು ಮತ್ತು ಡ್ರಗ್ ಘಾಟು ಹೊಡೀತಿದ್ಯಾ ಅಂತ ಎನ್.ಸಿ.ಬಿ. ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
  • ಇದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.

Go to Top