Daily archive

September 01, 2020

ನನಗೆ ರೈಸ್ ಗೊತ್ತು ದಾಲ್ ಗೊತ್ತು ಅಂತ ಕಿಚ್ಚ ಸುದೀಪ್ ಹೇಳಿದ್ದೇಕೆ?

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್/ಸಿನೆಮಾ ಪುಟ
  • ನನಗೆ ರೈಸ್ ಗೊತ್ತು ದಾಲ್ ಗೊತ್ತು, ಶೂಟಿಂಗ್ ಬಿಟ್ಟರೆ ಮನೆ, ಮನೆ ಬಿಟ್ಟರೆ ಶೂಟಿಂಗ್ ಗೆ ಹೋಗೋದು ಗೊತ್ತು. ಅದು ಬಿಟ್ರೆ ಈ ಡ್ರಗ್ಸ್ ಬಗ್ಗೆ ಎಲ್ಲಾ ನನಗೇನೂ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ ಎಂದು ನಟ ಸುದೀಪ್ ಹೇಳಿದ್ದಾರೆ. ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಅವರು ಲಿಂಗೈಕ್ಯ ಸ್ವಾಮೀಜಿಗಳ ದರ್ಶನ ಪಡೆದ ನಂತರ ಸುದ್ದಿಗಾರರರೊಂದಿಗೆ ಮುಕ್ತವಾಗಿ ಮಾತನಾಡಿದರು.
  • ಚಿತ್ರರಂಗ ಇಲ್ಲಿ ತನಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಅದೇ ರೀತಿ ಇದೂ ಕೂಡ ಒಂದು. ಮುಂದೆ ಎಲ್ಲವೂ ಸರಿಹೋಗುತ್ತದೆ. ಕಣ್ಣಿಗೆ ಕಾಣುವ ಶತ್ರು ಜೊತೆಗೆ ಫೈಟ್ ಮಾಡಬಹುದು. ಆದರೆ ಕಣ್ಣಿಗೆ ಕಾಣದಂತಹ ಶತ್ರು ವಿರುದ್ಧ ಫೈಟ್ ಮಾಡೋದು ಹೇಗೆ ಹೇಳಿ. ಅದಕ್ಕೆ ನಿಮ್ಮಂತಹ ಯುವ ಪೀಳಿಗೆಯವರು ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.
  • ಈ ಕೊರೋನಾ ಅವಧಿಯಲ್ಲಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಮೂರು ತಿಂಗಳ ಹಿಂದೆ ಇದ್ದ ಭಯ ಈಗ ಕಡಿಮೆಯಾಗಿದೆ. ಅದೇ ರೀತಿ ಇದು ಕೂಡ ಸರಿಹೋಗಬಹುದು ಆಶಾಭಾವನೆ ವ್ಯಕ್ತಪಡಿಸಿದರು.
  • ಇಂದ್ರಜಿತ್ ಲಂಕೇಶ್ ಜೊತೆಗೆ ಬಂದಿದ್ದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರು ನನಗೆ 1996ರಿಂದಲೂ ಸ್ನೇಹಿತರು. ನಾವಿಬ್ಬರು ಆವಾಗ ಶಟಲ್ ಕಾಕ್ ಆಡುತ್ತಿದ್ದೆವು. ನನಗಿಂತ ಅವರಿಗೆ ಸಿದ್ದಗಂಗಾ ಕ್ಷೇತ್ರದ ಸಂಪರ್ಕ ಹೆಚ್ಚಾಗಿದೆ. ಅವರು ಈಗ ಸುದ್ದಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಅವರನ್ನು ನಾನು ದೂರ ಇಟ್ಟು ಬರಬೇಕು ಅಂತ ಅನ್ನಿಸಲಿಲ್ಲ. ನಾನು ಅಷ್ಟೆಲ್ಲಾ ಲೆಕ್ಕಾಚಾರ ಹಾಕುತ್ತಾ ಕೂರುವುದಿಲ್ಲ. ಅವರ ಜೊತೆ ಬಂದರೆ ತಪ್ಪೇನು ಇಲ್ಲವಲ್ಲ. ಹಾಗಾಗಿ ಬಂದೆ ಎಂದರು.

Go to Top