Monthly archive

August 2020

ಸಿಸಿಬಿ ಅಧಿಕಾರಿಗಳ ಬಳಿ ನನಗೆ ಜೀವಭಯವಿದೆ ಅಂತ ಹೇಳಿಕೊಂಡ್ರಾ ಇಂದ್ರಜಿತ್?

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • ಕನ್ನಡ ಚಿತ್ರರಂಗದ ಇತ್ತೀಚಿನ ತಲೆಮಾರಿನ ಕೆಲ ನಟ-ನಟಿಯರಿಗೆ ಡ್ರಗ್ಸ್ ಚಟ ಅಂಟಿಕೊಂಡಿದೆ ಎಂದು ವಿವಾದಾತ್ಮಕ  ಹೇಳಿಕೆ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಇಂದು ಸಿಸಿಬಿಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
  • ಕೇಂದ್ರ ಅಪರಾಧ ದಳದ ಕಚೇರಿಗೆ ಇಂದು ಬೆಳಿಗ್ಗೆ ಹಾಜರಾದ ಇಂದ್ರಜಿತ್ ಅವರು ತಮ್ಮ ಕೈಯಲ್ಲಿ ಕಪ್ಪು ಫೈಲೊಂದನ್ನು ಹಿಡಿದುಕೊಂಡಿದ್ದರು. ಬಹುಶಃ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ತೋರಿಸಿದ್ದಾರೆ ಎನ್ನಲಾಗಿದೆ.
  • ಸತತ ನಾಲ್ಕು ಗಂಟೆಗಳ ಕಾಲ ಸಿಸಿಬಿ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಗೌತಮ್ ಹಾಗೂ ಬೋಳೆತ್ತಿನ್ ಅವರ ಪ್ರಶ್ನೆಗಳಿಗೆ ಇಂದ್ರಜಿತ್ ಉತ್ತರ ನೀಡಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.
  • ಇದೇ ವೇಳೆ ಅವರು ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಅದೇ ರೀತಿ ನನಗೆ ಜೀವಭಯ ಕೂಡ ಇದೆ ಎಂದು ಪೊಲೀಸ್ ಅಧಿಕಾರಿಗಳ ಬಳಿ ಹೇಳಿದ್ದಾರೆ ಎನ್ನಲಾಗಿದೆ.

1 2 3 84
Go to Top