Daily archive

June 06, 2020

ಕೂಚಿಪುಡಿ ಎಂಬುದು ಗ್ರಾಮದ ಹೆಸರು

in Uncategorized/ಇದು ಪ್ರತಿವಾರದ ಅಚ್ಚರಿ/ಜಿಲ್ಲಾ ಸುದ್ದಿಗಳು

ಕೂಚಿಪುಡಿ ಎಂಬುದು ಗ್ರಾಮದ ಹೆಸರು

tripursundari-kuchipudi

ಭರತನಾಟ್ಯದಲ್ಲೇ ತನ್ನ ವಿಶೇಷತೆ ಪಡೆದಿರುವ ಕಾರಣಕ್ಕೆ ಕೂಚಿಪುಡಿ ಎಂಬ ಶೈಲಿ ಈಗಲೂ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ. ಇದಕ್ಕೆ ಈ ಹೆಸರು ಬಂದದಾದರೂ ಹೇಗೆ ಎಂಬುದೇ ಸ್ವಾರಸ್ಯಕರ. ಆಂಧ್ರಪ್ರದೇಶದ ವಿಜಯವಾಡ ಬಳಿ ಇರುವ ಕೂಚಿಪುಡಿ ಗ್ರಾಮದಲ್ಲಿ ಸಂಪ್ರದಾಯಸ್ಥರು ತಮ್ಮ ಹೆಣ್ಣು ಮಕ್ಕಳಿಗೆ ಈ ಶಾಸ್ತ್ರೀಯ ಕಲೆ ಕಲಿಸುತ್ತಿದ್ದರಾದರೂ ಹೊರಗಿನ ಪ್ರಪಂಚಕ್ಕೆ ಇದರ ಅರಿವಿರಲಿಲ್ಲ. ಆದರೆ ಸ್ತ್ರೀಯರೂ ಕೂಡ ಸಮಾಜದಲ್ಲಿ ಪುರುಷರಷ್ಟೇ ಸಬಲರು ಎಂಬ ಅಚಲ ನಂಬಿಕೆ ಇದ್ದ ಅದೇ ಹಳ್ಳಿಯ ಸಿದ್ಧೇಂದ್ರಯೋಗಿ ಎಂಬ ಕ್ರಾಂತಿಕಾರಿ ಸಂತನ ಕಾರಣಕ್ಕೆ ಈ ಕಲೆ ಇತರರೆಡೆಗೂ ಪಸರಿಸಿತು. ಆರಂಭದಲ್ಲಿ ಸಂಸ್ಕೃತದಲ್ಲಿ ಪೌರಾಣಿಕ ಕಥೆಗಳನ್ನೂ ನಿರೂಪಿಸುತ್ತಿದ್ದ ಈ ನೃತ್ಯ ಕ್ರಮೇಣ ಸಾಮಾನ್ಯ ತೆಲುಗು ಭಾಷೆಯಲ್ಲಿ ನಿರೂಪಿಸಲ್ಪಡತೊಡಗಿತು. ಅದೆಷ್ಟು ಶಾಸ್ತ್ರೀಯ ಅಂತ ಭಾವಿಸಿದರೂ, ಕೂಚಿಪುಡಿ ನೃತ್ಯದ ಅಭಿಮಾನಿಗಳು ಜಗತ್ತಿನಾದ್ಯಂತ ಇರುವುದು ಮಾತ್ರ ಸತ್ಯ!

Go to Top