Monthly archive

May 2020

ಕೊರೋನಾ ತೊಲಗಿಸಲು ವ್ಯಕ್ತಿಯೊಬ್ಬನ ತಲೆ ಕಡಿದು ದೇವರಿಗೆ ಅರ್ಪಿಸಿದ ಪೂಜಾರಿ! 

in ಜಿಲ್ಲಾ ಸುದ್ದಿಗಳು

ಕೊರೋನಾ ತೊಲಗಿಸಲು ವ್ಯಕ್ತಿಯೊಬ್ಬನ ತಲೆ ಕಡಿದು ದೇವರಿಗೆ ಅರ್ಪಿಸಿದ ಪೂಜಾರಿ! 

ಕೊರೋನಾ ವೈರಸ್ ಈ ಜಗತ್ತಿನಿಂದ ತೊಲಗಲಿ ಅನ್ನೋದು ಎಲ್ಲರ ಆಶಯ ನಿಜ.ಹಾಗಂತ  ಮನುಷ್ಯನ ತಲೆಯನ್ನೇ ಕಡಿದು ದೇವರಿಗೆ ಅರ್ಪಿಸಿಬಿಟ್ರೆ, ಕೊರೋನಾ ವೈರಸ್ ಹೆದರಿ ಓಡಿಬಿಡುತ್ತಾ? ಜನ ಸಾಯೋದು ನಿಲ್ಲುತ್ತಾ?

ಈ ಅಮಾನುಷ ಘಟನೆ ಓದಿ.

ಕಟಕ್ ನಲ್ಲಿನ ಸನ್ಸಾರಿ ಓಜ್ಹಾ ಅನ್ನೋ ಪೂಜಾರಿಯೊಬ್ಬ ಕೊರೋನಾ ವೈರಸ್ ತೊಲಗಲಿ ಅಂತ ವ್ಯಕ್ತಿಯೊಬ್ಬನ ತಲೆ ಕಡಿದು ಆತ ಪೂಜಿಸುತ್ತಿದ್ದ ಬ್ರಹ್ಮಣಿ ದೇವಿಗೆ ಅರ್ಪಣೆ ಮಾಡಿದ್ದಾನೆ. ಕನಸಿನಲ್ಲಿ ಬಂದ ದೇವಿ ಪೂಜಾರಿಗೆ ಹಾಗೆ ಆಜ್ಞೆ ಮಾಡಿದಳಂತೆ. ನೀನು ಮನುಷ್ಯನ ತಲೆ ಕಡಿದು ನನಗೆ ಅರ್ಪಿಸು. ಕೊರೋನಾ ಬೆಳಗ್ಗೆ ಆಗುವಷ್ಟರಲ್ಲಿ ಇದ್ದರೆ ಕೇಳು ಅಂತ.

ಮೂರ್ಖ ಪೂಜಾರಿ ದೇವಿ ಹೇಳಿದ್ದನ್ನ ಚಾಚೂ ತಪ್ಪದೆ ಮಾಡಿದ್ದಾನೆ. ಕೊಡಲಿ ತಗೊಂಡು ಐವತ್ತೆರಡು ವರ್ಷದ ಸರೋಜ್ ಕುಮಾರ್ ಅನ್ನೋನ ತಲೆ ಕಡಿದು ದೇವಿಗೆ ಅರ್ಪಿಸಿದ್ದಾನೆ. ರಾತ್ರಿ ಗಡದ್ದಾಗಿ ಎಣ್ಣೆ ಹೊಡೆದು, ಮಾರಿಜುವಾನಾ ಸೇವಿಸಿದ್ದ ಪೂಜಾರಿಗೆ ಭರ್ತಿ ನಶೆಯಲ್ಲಿ ತಾನು ಕಡಿದಿದ್ದು ಕೋಳಿ ತಲೇನಾ ಮನುಷ್ಯನ ತಲೇನ ಅಂತ ಗೊತ್ತಾಗಲಿಲ್ಲವೇನೋ!  ಬೆಳಗ್ಗೆ ನಶೆ ಇಳಿದ ಮೇಲೆ ಗೊತ್ತಾಗಿದೆ. ಗಾಬರಿಯಾಗಿ ಪೊಲೀಸ್ ಸ್ಟೇಷನ್ ಗೆ ಕೊಡಲಿ ಸಮೇತ ಹೋಗಿ ಶರಣಾಗಿದ್ದಾನೆ.

ಇಂಥ ಮೂಢರನ್ನ ಏನು ಮಾಡೋದು?

ನಾವು ಯಾವ ಶತಮಾನದಲ್ಲಿದ್ದೀವಿ?

ಒಂದು ಕಡೆ ಜಗತ್ತಿನ ಸರ್ವಶ್ರೇಷ್ಠ ವಿಜ್ಞಾನಿಗಳೆಲ್ಲಾ ಕೊರೋನಾ ತೊಲಗಿಸಲು ವ್ಯಾಕ್ಸಿನ್ ಸಂಶೋಧನೆಯಲ್ಲಿ ತೊಡಗಿದ್ದಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಒಂದು ವ್ಯಾಕ್ಸಿನ್ ಸಿಕ್ಕಿದ್ರೆ ಸಾಕು, ಜನರನ್ನ ಸಾವಿನಿಂದ ಬಚಾವ್ ಮಾಡಬಹುದಲ್ಲಾ ಅಂತ ಹಗಲು ರಾತ್ರಿ ಲ್ಯಾಬಲ್ಲಿ ದುಡಿತಿದ್ದಾರೆ. ಇನ್ನೊಂದು ಕಡೆ ವೈದ್ಯರು, ನರ್ಸ್ ಗಳು ಕೊರೋನಾ ಸೋಂಕಿತರನ್ನ ಬದುಕಿಸಲು ಜೀವ ಪಣಕ್ಕಿಟ್ಟು ಹೋರಾಡ್ತಿದ್ದಾರೆ.

ಇವನ್ಯಾರೋ ಪೂಜಾರಿ ಅವಳಾರೋ ದೇವತೆ ಹೇಳಿದ್ಲು ಅಂತ ತಲೆ ಕಡಿದಿದ್ದಾನೆ.

ಇವರಿಗೆಲ್ಲಾ ಏನಾಗಿದೆ?

ನಿಜಕ್ಕೂ ಬೇಸರ. ಸಿಟ್ಟು.

1 2 3 12
Go to Top