ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಮಾನ ಹರಾಜಾಗುವುದನ್ನು ತಡೆದ ಮಹಾನುಭಾವ!

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಮಾನ ಹರಾಜಾಗುವುದನ್ನು ತಡೆದ ಮಹಾನುಭಾವ!

ನಾನು ಸಣ್ಣ ಪತ್ರಿಕೆಯೊಂದರ ವರದಿಗಾರ. ಸಂಬಳವೂ ಅಷ್ಟಕ್ಕಷ್ಟೇ. ಪತ್ರಿಕೋದ್ಯಮದಲ್ಲಿ ಯಾರಿಂದಲೂ ಹಣ ಕೇಳದೆ, ಬಂದುದರಲ್ಲಿ  ಸಂಸಾರ ತೂಗಿಸುತ್ತಿದ್ದೆ. ಮೂರು ಮಕ್ಕಳು, ತಾಯಿ, ಭಾರದ ಸಂಸಾರವಾದರೂ, ಹಿರಿಯರ ಸ್ವಲ್ಪ ಆಸ್ತಿ, ಅತ್ತೆ-ಮಾವನವರ ಬೆಂಬಲ, ಹೆಂಡತಿಯಿಂದಾಗಿ ಆರಕ್ಕೆ ಏರದ ಮೂರಕ್ಕೆ ಇಳಿಯದ ಸ್ಥಿತಿ. ಹೇಗೋ ಹಿರಿಯ ಮಗ ಬಿ.ಇ., ಪರೀಕ್ಷೆಯಲ್ಲಿ ಪಾಸಾದ. ಭವಿಷ್ಯಕ್ಕಾಗಿ ಕೇರಳದಲ್ಲಿ ಇರುವ ಇಂಜಿನಿಯರುಗಳ ಸಂಘದ ಸದಸ್ಯನಾಗಲು ಐನೂರು ರುಪಾಯಿ ಶುಲ್ಕ ನೀಡಬೇಕಾಗಿತ್ತು. ಬೆಳಗ್ಗೆ ಹೇಗಾದರೂ ನನಗೆ ಹಣ ಬೇಕೆಂದ. ನನ್ನ ಬಳಿ ಹಣ ಇರಲಿಲ್ಲ. ಐನೂರು ರುಪಾಯಿಗಾಗಿ ದೊಡ್ಡ ರಾದ್ಧಾಂತ! ಐನೂರು ರುಪಾಯಿ ಇಲ್ಲವೆಂದರೆ, ಹೇಗಾದರೂ ನನಗೆ ಹಣ ಬೇಕೆಂದ! ಏನು ಮಾಡುವುದೆಂದು ಯೋಚಿಸಿದೆ. ನನ್ನ ಸಂಬಂಧಿಕರ ಮನೆಗೆ ಹೋದೆ. ನನ್ನ ಮಗನ ಭವಿಷ್ಯಕ್ಕೆ ಅರ್ಜೆಂಟಾಗಿ ಐನೂರು ರುಪಾಯಿ ಬೇಕೆಂದೆ. ಅವರು ಕೆಲಸದ ನಿಮಿತ್ತವಾಗಿ ಊರಿಗೆ ಹೋಗಬೇಕಾಗಿತ್ತು. ಅದನ್ನು ರದ್ಧುಗೊಳಿಸಿ ಹಣ ನೀಡಿ ನನ್ನ ಮಾನ ಉಳಿಸಿದರು!

ಬಾಬುರಾವ್ ಕುಲಕರ್ಣಿ, ವಿಜಾಪುರ

 

Leave a Reply

Your email address will not be published. Required fields are marked *