ಕೋವಿಡ್ ವೈರಸ್ ಸೃಷ್ಟಿಯಾಗಿದ್ದು ವುಹಾನ್ ಲ್ಯಾಬ್ ನಲ್ಲಿ

in ಲೀಡ್ ನ್ಯೂಸ್
  • ಚೀನಾದ ವುಹಾನ್ ನ ಲ್ಯಾಬ್ ನಲ್ಲಿ ಕೋವಿಡ್ 19  ವೈರಸ್ಸನ್ನು ಉತ್ಪಾದನೆ ಮಾಡಲಾಗಿದೆಯೆ ಹೊರತು ಯಾವುದೇ ಮಾರುಕಟ್ಟೆಯಲ್ಲಿ ಇದು ಹುಟ್ಟಿಕೊಂಡಿಲ್ಲ, ಇದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ, ವೈರಸ್ಸಿನ ಜೆನೋಮ್ ಸೀಕ್ವೆನ್ಸ್ ನಲ್ಲಿ ಮನುಷ್ಯನ ಫಿಂಗರ್ ಪ್ರಿಂಟ್ ಇದೆ ಎಂದು ಚೀನಿ ವೈರಾಲಜಿಸ್ಟ್ ಲಿ ಮೆಂಗ್ ಯಾನ್ ಸ್ಫೋಟಕ ಮಾಹಿತಿ ನೀಡಿದ್ದಾರೆ.
  • ಚೀನಾದ ಬಣ್ಣ ಬಯಲು ಮಾಡಿರುವ ಲಿ ಮೆಂಗ್ ಯಾನ್ ಈ ಮೊದಲು ಹಾಂಕ್ ಕಾಂಗ್ ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 31, 2019ರಂದೇ ಅವರು ಈ ವೈರಸ್ ನ ಬಗ್ಗೆ ತನಿಖೆ ನಡೆಸುವಂತೆ ತಮ್ಮ ಸೂಪರ್ ವೈಸರ್ ಗೆ ಸೂಚಿಸಿದ್ದರು. ಆದರೆ ಯಾವುದೇ ರೀತಿಯ ತನಿಖೆಯೂ ನಡೆಯಲಿಲ್ಲ. ಮೇಲಾಗಿ ಆಕೆಯನ್ನು ತೆಪ್ಪಗೆ ಇರುವಂತೆ ಗದರಿಸಲಾಯಿತು ಮತ್ತು ಆಕೆಯ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳನ್ನು ಹಬ್ಬಿಸಲಾಯಿತು.
  • ಅಮೆರಿಕಾದಲ್ಲಿ ಆಶ್ರಯ ಪಡೆದುಕೊಳ್ಳುವ ಸಲುವಾಗಿ ಚೀನಾದಿಂದ ಪಲಾಯನ ಮಾಡಿರುವ ಲಿ ಮೆಂಗ್ ಯಾನ್ ಸದ್ಯಕ್ಕೆ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆಕೆ ಎಲ್ಲೋ ಅಡಗಿಕೊಂಡು ರಹಸ್ಯವಾಗಿ ಮಾಹಿತಿ ಹೊರಹಾಕಿದ್ದಾರೆ.
  • ಇನ್ನಾದರೂ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.

Leave a Reply

Your email address will not be published.

*

Latest from ಲೀಡ್ ನ್ಯೂಸ್

Go to Top